– ಟೋಲ್ಗಳಲ್ಲಿ ನೋ ಫಾಸ್ಟ್ಟ್ಯಾಗ್, ನೋ ಎಂಟ್ರಿ ಬೋರ್ಡ್
ಬೆಂಗಳೂರು: ಇವತ್ತಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯವಾಗಿದ್ದು, ಫಾಸ್ಟ್ಟ್ಯಾಗ್ ಇಲ್ಲವಾದರೆ ಟೋಲ್ಗಳಲ್ಲಿ ಪ್ರವೇಶವೇ ಇಲ್ಲ. ಇಲ್ಲವೇ 2 ಪಟ್ಟು ಟೋಲ್ ಕಟ್ಟಿ ಪ್ರಯಾಣಿಸಬೇಕಿದೆ.
ಫಾಸ್ಟ್ಟ್ಯಾಗ್ ಕಡ್ಡಾಯ ಹಿನ್ನೆಲೆ ಎಲ್ಲ ಟೋಲ್ಗಳಲ್ಲಿ `ನೋ ಫಾಸ್ಟ್ಟ್ಯಾಗ್, ನೋ ಎಂಟ್ರಿ’ ಬೋರ್ಡ್ ಹಾಕಲಾಗಿದ್ದು, ಫಾಸ್ಟ್ಟ್ಯಾಗ್ ಇಲ್ಲವಾದರೆ ಟೋಲ್ನ 2 ಪಟ್ಟು ಹಣ ಕಟ್ಟಬೇಕು. ಇಂದು ಮಧ್ಯ ರಾತ್ರಿಯಿಂದ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
Advertisement
Advertisement
ಒಂದೆಡೆ ಫಾಸ್ಟ್ಟ್ಯಾಗ್ ಪಡೆಯುವುದು ಸಮಸ್ಯೆಯಾದರೆ, ಮತ್ತೊಂದೆಡೆ ಫಾಸ್ಟ್ಟ್ಯಾಗ್ ನಲ್ಲಿ ಹಣ ಇದ್ದರೂ ಸ್ಕ್ಯಾನ್ ಆಗ್ತಿಲ್ಲ. ಹೀಗಾಗಿ ದುಪ್ಪಟ್ಟು ಟೋಲ್ ವಸೂಲಿ ಮಾಡಲಾಗುತ್ತಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ ಸಿಬ್ಬಂದಿ ಜೊತೆಗೆ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ಟ್ಯಾಗ್ ಇಲ್ಲದವರ ಬಳಿ ಡಬಲ್ ಚಾರ್ಜ್ ಕಟ್ಟಿಸಿಕೊಳ್ಳಲಾಗುತ್ತಿದೆ.
Advertisement
ಏರ್ ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರು ಕಿರಿಕ್ ಮಾಡಿಕೊಳ್ಳುತ್ತಿದ್ದು, ಫಾಸ್ಟ್ಟ್ಯಾಗ್ ಮಾಡುವ ಸ್ಥಳದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಕಿರಿಕ್ ಶುರುವಾಗಿದೆ. ಮತ್ತೊಂದೆಡೆ ಟೋಲ್ ಪ್ಲಾಜಾ ಬಳಿಯೇ ಫಾಸ್ಟ್ಟ್ಯಾಗ್ ಅಳವಡಿಕೆ ನಡೆದಿದೆ.
Advertisement
ತೀವ್ರಗೊಂಡ ವಾಗ್ವಾದ
ಹೊಸಕೋಟೆ ಟೋಲ್ ನಲ್ಲಿ ಸ್ಟೋರ್ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಫಾಸ್ಟ್ಟ್ಯಾಗ್ ಮಾಡಿಸದಿದ್ದರೆ ದುಪ್ಪಟ್ಟು ಹಣದ ಬರೆ. ಎಲ್ಸಿವಿ ವಾಹನಗಳಿಗೆ 30 ರೂ. ಇದ್ದ ಟೋಲ್ ದರ 60 ರೂ. ಆಗಿದೆ. ಬಸ್, ಲಾರಿಗಳಿಗೆ ಇದ್ದ 65 ರೂ. ಇದೀಗ 135 ರೂ. ಆಗಿದೆ. ಫಾಸ್ಟ್ಟ್ಯಾಗ್ ಮಾಡಿಸಿದವರಿಗೆ ಮಾತ್ರ ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಫೆ.15 ರಿಂದ ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.
ದುಪ್ಪಟ್ಟು ಹಣ ಕೇಳುತ್ತಿದ್ದಂತೆ ಕೆಲವು ಕಾರುಗಳು ಹಿಂದಕ್ಕೆ ಹೋಗುತ್ತಿವೆ. ದುಪ್ಪಟ್ಟು ಹಣ ವಸೂಲಿ ಹಿನ್ನೆಲೆ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ನಿನ್ನೆಯಿಂದಲೇ ಟೋಲ್ ರಸ್ತೆಗೆ ಹೋಗುತ್ತಿಲ್ಲ. ಅಲ್ಲದೆ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಬಳಿಯೇ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ವಾಹನ ಮಾಲೀಕರು ದುಪ್ಪಟ್ಟು ಹಣ ಯಾಕೆ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಿರುವುದು ಕೆಲ ವಾಹನಗಳ ಮಾಲೀಕರಿಗೆ ಗೊತ್ತಿಲ್ಲ.