– ಪಬ್ಲಿಕ್ ಟಿವಿಯಲ್ಲಿ ‘ಸಿದ್ಧಾಸ್ತ್ರ’ ಇನ್ಸೈಡ್ ಸ್ಟೋರಿ
ಬೆಂಗಳೂರು: ಮೈಸೂರು ಮೇಯರ್ ಚುನಾವಣೆಯಿಂದಾಗಿ ಕಾಂಗ್ರೆಸ್ನಲ್ಲಿದ್ದ ಆಂತರಿಕ ಕಲಹಗಳು ಬಹಿರಂಗಗೊಳ್ಳುತ್ತಿದ್ದು, ಸಿದ್ದರಾಮಯ್ಯ ವರ್ಸಸ್ ಡಿ.ಕೆ.ಶಿವಕುಮಾರ್ ನಡುವಿನ ಕಾಳಗವೇ ಎಂಬಂತೆ ಬಿಂಬಿತವಾಗಿದೆ. ಆದ್ರೆ ಈ ಕಲಹ ಮೂಲ ವರ್ಸಸ್ ವಲಸಿಗ ಫೈಟ್ ಅನ್ನೋ ಮತ್ತೊಂದು ಆಯಾಮ ಪಡೆದುಕೊಂಡಿದೆ. ಈ ನಡುವೆ ಜೆಡಿಎಸ್ ಜೊತೆಗಿನ ಬೇಸರಗೊಂಡಿದ್ದ ಸಿದ್ದರಾಮಯ್ಯನವರು ಫಾರ್ಮ್ ಹೌಸ್ ಸೇರಿದ್ದರು. ಇಂದು ದಹೆಲಿಯತ್ತ ಪ್ರಯಾಣ ಬೆಳೆಸಿರುವ ಸಿದ್ದರಾಮಯ್ಯನವರು ಫಾರ್ಮ್ ಹೌಸ್ ನಲ್ಲಿ ಹೊಸ ದಾಳ ಉರುಳಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಸಿದ್ಧಾಸ್ತ್ರ ಸಿದ್ಧ ಪಡಿಸಿಕೊಂಡಿದ್ದ ಮಾಜಿ ಸಿಎಂ ನಿನ್ನೆ ಆಪ್ತರ ಮೂಲಕ ಅಸ್ತ್ರ ಪ್ರಯೋಗಿಸಿದ್ದರು. ಶಾಸಕ ತನ್ವೀರ್ ಸೇಠ್ ಹಿಂದೆ ಮೂಲ ಕಾಂಗ್ರೆಸ್ ಧ್ವನಿ ಅಡಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯನವರು ತಿರುಗೇಟು ನೀಡಲು ಆಪ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಪುತ್ರ ಶಾಸಕ ಯತೀಂದ್ರ ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಮ್ಮ ಹುಲಿ ಯಾವತ್ತು ಹುಲಿಯೇ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಧ್ರುವ ನಾರಾಯಣ್
Advertisement
Advertisement
ನಾನು ಸೈಲೆಂಟ್ ಆಗಿರ್ತೀನಿ ಅಂತ ನೀವೂ ಸೈಲೆಂಟ್ ಆಗಿರಬಾರದು. ಮುಯ್ಯಿಗೆ ಮುಯ್ಯಿ ತೀರಿಸಲೇಬೇಕು, ನಾನು ಸುಮ್ಮನೇ ಕೂರಲ್ಲ. ಎಷ್ಟು ಸೈಲೆಂಟ್ ಆಗಿರ್ತೀನೋ, ಅಷ್ಟೇ ವಾಪಸ್ ಕೊಡ್ತೀನಿ. ನೀವು ಹೆದರಬೇಕಿಲ್ಲ, ನಿಮ್ಮ ಪಾಡಿಗೆ ನೀವು ರಾಜಕೀಯ ಮಾಡಿ. ರಾಜಕೀಯದ ಮಾತು ಏಟು-ಎದಿರೇಟು ಮುಂದುವರಿಯಲಿ. ಹೈಕಮಾಂಡ್ ಮುಂದೆ ಏನ್ ಮಾಡಬೇಕು ಅಂತ ನಾನು ನೋಡಿಕೊಳ್ಳುತ್ತೇನೆ ಎಂದು ಆಪ್ತರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಒಬ್ಬ ನಾಯಕನ ಹಿನ್ನಡೆಗೆ ಮೇಯರ್ ಸ್ಥಾನ ಬೇರೆ ಪಕ್ಷಕ್ಕೆ ಬಿಟ್ಟುಕೊಟ್ರು- ಡಿಕೆಶಿ ವಿರುದ್ಧ ಯತೀಂದ್ರ ಪರೋಕ್ಷ ವಾಗ್ದಾಳಿ