-ಕನ್ನಡದಲ್ಲೇ ವಿಶ್ ಮಾಡಿದ ಪವನ್ ದೇಶಪಾಂಡೆ
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ವಿರಾಟ್ ಕೊಹ್ಲಿ, ತಂಡದ ಆಟಗಾರರು ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅಬುಧಾಬಿಯ ಪ್ರೈವೇಟ್ ಬೋಟ್ನಲ್ಲಿ ಆರ್ ಸಿಬಿ ತಂಡದ ಮಾಲೀಕರು ಪಾರ್ಟಿ ಏರ್ಪಡಿಸಿದ್ದು, ಗರ್ಭಿಣಿಯಾಗಿರುವ ಅನುಷ್ಕಾ, ಕೊಹ್ಲಿಗೆ ಕೇಕ್ ತಿನ್ನಿಸಿ, ಅಪ್ಪುಗೆ ಕೊಟ್ಟು ಹುಟ್ಟಹಬ್ಬದ ಶುಭಾಶಯ ಕೋರಿದ್ದಾರೆ. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ಆರ್ ಸಿಬಿ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
Advertisement
RCB Insider with Mr. Nags: Virat Kohli’s birthday
Mr. Nags snuck on to the yacht last night. Find out what shenanigans he got into with our stars. #PlayBold #IPL2020 #WeAreChallengers #Dream11IPL pic.twitter.com/nhGscmQHbd
— Royal Challengers Bangalore (@RCBTweets) November 5, 2020
Advertisement
ಕೊಹ್ಲಿ 32ನೇ ವರ್ಷದ ಹುಟ್ಟುಹಬ್ಬದ ಪಾರ್ಟಿ ಹಿನ್ನೆಲೆಯಲ್ಲಿ ಉಮೇಶ್ ಯಾದವ್ರೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಮೊಹಮ್ಮದ್ ಸಿರಾಜ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಮುಖಕ್ಕೆ ಬಳಿದು ಸಂಭ್ರಮಿಸಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವಿಡಿಯೋದಲ್ಲಿ ಆರ್ ಸಿಬಿ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಕೊಹ್ಲಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ವಿಶೇಷ ಎಂದರೇ, ಪವನ್ ದೇಶಪಾಂಡೆ ಕನ್ನಡದಲ್ಲೇ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಗಮನಸೆಳೆದಿದ್ದಾರೆ.
Advertisement
Happy Birthday Captain Kohli
Happy faces and positive vibes. The RCB family put together a special video to celebrate King Kohli’s birthday at 12 midnight. ????????❤️#PlayBold #IPL2020 #WeAreChallengers #Dream11IPL pic.twitter.com/ViaI9eItDV
— Royal Challengers Bangalore (@RCBTweets) November 5, 2020
Advertisement
ಶುಕ್ರವಾರ ಅಬುಧಾಬಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಆರ್ ಸಿಬಿ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಐಪಿಎಲ್ 2020ರ ಟೂರ್ನಿಯಲ್ಲಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶ ಮಾಡಿದೆ. ನಾಲ್ಕು ವರ್ಷಗಳ ಬಳಿಕ ಪ್ಲೇ ಆಫ್ ತಲುಪಿರುವ ಕೊಹ್ಲಿ ಪಡೆಗೆ ಕಪ್ ಗೆಲ್ಲಲು ಇನ್ನು ಮೂರು ಗೆಲುವು ಬೇಕಿದೆ. ಸರಣಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನ ಕೊಹ್ಲಿ ಪಡೆ 2 ಬಾರಿ ಎದುರಿಸಿದ್ದು, ಟೂರ್ನಿಯ 3ನೇ ಪಂದ್ಯದಲ್ಲಿ ಆರ್ ಸಿಬಿ 10 ರನ್ ಗೆಲುವು ಪಡೆದರೆ, 52ನೇ ಪಂದ್ಯದಲ್ಲಿ ಹೈದರಾಬಾದ್ ತಂಡ 52 ರನ್ ಗಳ ಗೆಲುವು ಪಡೆದಿತ್ತು.
2020ರ ಟೂರ್ನಿಯಲ್ಲಿ ಕೊಹ್ಲಿ ಇದುವರೆಗೂ 122ರ ಸ್ಟ್ರೈಕ್ ರೇಟ್ನಲ್ಲಿ 460* ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ 23 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದು, 3 ಅರ್ಧ ಶತಕಗಳು ದಾಖಲಾಗಿದೆ.
How it started ➡️ how it ended ????
Captain Kohli’s birthday celebration was as smashing as his batting! ????@imVkohli#PlayBold #WeAreChallengers #HappyBirthdayViratKohli pic.twitter.com/sWsuNJHxse
— Royal Challengers Bangalore (@RCBTweets) November 5, 2020