ಬಾಗಲಕೋಟೆ: ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದು, ಘಟಪ್ರಭಾ ನದಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಲವ್ ಜಿಹಾದ್ ಪ್ರಕರಣ ಎಂದು ಮೃತ ಯುವತಿಯ ಕುಟುಂಬಸ್ಥರು ಮತ್ತು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಜ್ಯೋತಿ ಭಾಗವ್ವಗೋಳ(22) ಕೊಲೆಯಾದ ಯುವತಿ. ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಯುವತಿಯ ಶವ ಪತ್ತೆಯಾಗಿದೆ.
Advertisement
Advertisement
ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಆರೋಪಿ ಪ್ರೇಮಿ ಹನೀಫ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
Advertisement
ಜ್ಯೋತಿ ಬಾಗಲಕೋಟೆ ನಗರದಲ್ಲಿ 3ನೇ ವರ್ಷದಲ್ಲಿ ನರ್ಸಿಂಗ್ ಓದುತ್ತಾ, ಖಾಸಗಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ನರ್ಸಿಂಗ್ ಕಲಿಕೆಗಾಗಿ ಬಾಗಲಕೋಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಓದಿನ ಜೊತೆಗೆ ಹನೀಫ್ ಆಸ್ಪತ್ರೆಯಲ್ಲಿ ಕೆಲ್ಸ ಮಾಡುತ್ತಿದ್ದ ಜ್ಯೋತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದನು.
ಪ್ರೀತಿ ವಿಚಾರ ಮೊದಲೇ ಗೊತ್ತಿದ್ದ ಯುವತಿ ಜ್ಯೋತಿ ಕುಟುಂಬಸ್ಥರು, ಜಾತಿ ಬೇರೆ ಎಂದು ಹನೀಫ್ಗೆ ಬುದ್ಧಿವಾದ ಹೇಳಿದ್ದರು. ಹನೀಫ್ ಯುವತಿಯ ಕುಟುಂಬಸ್ಥರ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ಜ್ಯೋತಿ ಶೀಲದ ಬಗ್ಗೆ ಅನುಮಾನಗೊಂಡಿದ್ದ ಹನೀಫ್ ಫೆಬ್ರವರಿ 13 ರಂದು ಜ್ಯೋತಿಯನ್ನು ಪುಸಲಾಯಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಈ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿದ್ದು ಜ್ಯೋತಿಯನ್ನು ಕೊಲೆಗೈದು ಸಾಕ್ಷಿ ನಾಶಮಾಡಲು ಶವವನ್ನ ಘಟಪ್ರಭಾ ನದಿಗೆ ಎಸೆದು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣ ಬೇಧಿಸಿದ ಪೊಲೀಸರು, ಆರೋಪಿ ಹನೀಫ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಯ ಕೊಲೆ ಮಾಡಿರುವುದಾಗಿ ಆರೋಪಿ ಹನೀಫ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಪ್ರಕರಣಕ್ಕೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಶಂಕೆಯನ್ನ ವ್ಯಕ್ತಪಡಿಸಿವೆ. ದಲಿತ ಸಮುದಾಯದ ಯುವತಿ ಜ್ಯೋತಿ ನಾಪತ್ತೆ ಕೇಸ್, ಲವ್ ಜಿಹಾದ್ ಎಂದು ಆರೋಪಿಸುತ್ತಿರುವ ಹಿಂದೂಪರ ಸಂಘಟನೆ ಯುವತಿಯನ್ನ ಕೊಲೆಗೈದು ಸಾಕ್ಷಿ ನಾಶಪಡಿಸಲು ಮೃತ ದೇಹ ನದಿಗೆ ಎಸೆದಿದ್ದ ಆರೋಪಿ ವಿರುದ್ಧ ಕಠಿಣ ಶಿಕ್ಷೆ ನೀಡಿ ಅಂತಿದ್ದಾರೆ. ಇತ್ತ ಮೃತ ಯುವತಿಯ ಕುಟುಂಬಸ್ಥರು ಸಹ ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದು, ಕಠಿಣ ಶಿಕ್ಷೆಗೆ ಆಗ್ರಹಿಸಿ ಕಣ್ಣೀರಿಟ್ಟಿದ್ದಾರೆ.