ಬೆಂಗಳೂರು: ಪಾಗಲ್ ಪ್ರೇಮಿಯಿಂದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಕಬಡ್ಡಿ ಆಟಗಾರನನ್ನು ಪಾಗಲ್ ಮಾಡಿದ್ದೆ ಪ್ರಿಯತಮೆ ಯುವತಿ ನಿತ್ಯಶ್ರೀ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿದ್ದ ಯುವತಿ ನಿತ್ಯಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಗುಣಮುಖವಾಗುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಪಾಗಲ್ ಪ್ರೇಮಿ ಗಿರೀಶ್ ನಗರದ ವಿಶಾಲ್ ಮಾರ್ಟ್ ಬಳಿ ಬುಧವಾರ ಬೆಳಗ್ಗೆ ಪ್ರೇಯಸಿ ನಿತ್ಯ ಶ್ರೀ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದನು. ಬಳಿಕ ಸಂಜೆ ವೇಳೆಗೆ ತಾನೂ ಆತ್ಮಹತ್ಯೆಗೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
Advertisement
Advertisement
ಪಾಗಲ್ ಮಾಡಿದ್ದೆ ಪ್ರೇಯಸಿ:
ಗಿರೀಶ್ ರಾಜ್ಯ ಮಟ್ಟದ ಕಬಡ್ಡಿ ಆಟಗಾರನಾಗಿದ್ದನು. ಆದರೆ ಗಿರೀಶ್ ಮತ್ತು ನಿತ್ಯಶ್ರೀ ಇಬ್ಬರದ್ದು ಮೂರು ವರ್ಷದ ಲವ್ ಸ್ಟೋರಿ. ಐದಾರು ತಿಂಗಳ ಹಿಂದೆ ಗಿರೀಶ್ ಹಾಗೂ ನಿತ್ಯಶ್ರೀ ಇಬ್ಬರು ಮನೆಯವರ ಭಯಕ್ಕೆ ಓಡಿ ಹೋಗಿದ್ದರು. ಓಡಿ ಹೋದ ಬಳಿಕ ನಿತ್ಯಶ್ರೀ ಸಂಬಂಧಿಕರೊಬ್ಬರು ಮದುವೆ ಮಾಡಿಸುವುದಾಗಿ ನಂಬಿಸಿ ವಾಪಸ್ ಕರೆಸಿಕೊಂಡಿದ್ದರು.
Advertisement
ಆಗ ನಿತ್ಯಶ್ರೀಯನ್ನು ಮಂಡ್ಯದ ಬದಲು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿರಿಸಿದ್ದರು. ನಂತರ ಆಕೆಯ ಕುಟುಂಬಸ್ಥರು, ನಿತ್ಯಶ್ರೀ ಮೈಂಡ್ ವಾಶ್ ಮಾಡಿ ಇಬ್ಬರನ್ನು ಬೇರೆ ಬೇರೆ ಮಾಡಿದ್ದರು. ಈ ವೇಳೆ ಗಿರೀಶ್ ನಿತ್ಯಶ್ರೀಯ ಸಂಪರ್ಕವಿಲ್ಲದೇ ಹುಚ್ಚನಂತಾಗಿ ಕುಗ್ಗಿ ಹೋಗಿದ್ದನು. ಈ ಮಧ್ಯೆ ನಿತ್ಯಶ್ರೀ ಮನೆಯವರು ಆಕೆಗೆ ಬೇರೆ ಹುಡುಗನ ನೋಡಿ ಮದುವೆ ಮಾಡಲು ಮುಂದಾಗಿದ್ದರು. ಈ ವಿಚಾರವನ್ನು ಗಿರೀಶ್ ಸ್ನೇಹಿತರ ಬಳಿ ಹೇಳಿಕೊಂಡಿದ್ದನು.
Advertisement
ಬುಧವಾರ ಮನೆಯವರು ತನಗೆ ನೋಡಿದ್ದ ಹುಡುಗನನ್ನು ಭೇಟಿಯಾಗಲು ಯುವತಿ ನಿತ್ಯಶ್ರೀ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ. ಈ ಬಗ್ಗೆ ತಿಳಿದುಕೊಂಡ ಗಿರೀಶ್ ಆತನ ಪರಿಚಯವಾಗುವ ಮೊದಲೇ ಆಕೆಯನ್ನು ಕೊಲೆ ಮಾಡಬೇಕೆಂದು ಹಲ್ಲೆ ಮಾಡಿದ್ದನು.
ಗಿರೀಶ್ ಆತ್ಮಹತ್ಯೆ
ಪ್ರೇಯಸಿ ನಿತ್ಯಶ್ರೀ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಿರೀಶ್ ತಾವರೆಕೆರೆ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ನಿರಾಕರಿಸಿದ್ದ ಕಾರಣಕ್ಕೆ ಆರೋಪಿ ಗಿರೀಶ್ ಯುವತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಡಲೇ ಪ್ರಕರಣ ತನಿಖೆ ಮುಂದಾದ ಪೊಲೀಸರಿಗೆ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಕುರಿತು ಅನುಮಾನ ಮೂಡಿತ್ತು. ಆದ್ದರಿಂದ ಪೊಲೀಸರು ಆರೋಪಿಯ ಪತ್ತೆಗೆ ತ್ವರಿತ ಕಾರ್ಯಾಚರಣೆ ನಡೆಸಿದ್ದರು.
ತಾವರೆಕರೆ ಬಳಿಯ ತೋಪಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಮೃತ ಯುವಕ ಗಿರೀಶ್ ಎಂದು ಖಚಿತ ಪಡಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ಘಟನೆಯಲ್ಲಿ ಆಕೆ ಸಾವನ್ನಪ್ಪಿರುತ್ತಾಳೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ನಿಜವಾಗಿತ್ತು.