ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರೀತಿ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಯುವತಿಯಿಂದ ಕರೆ ಮಾಡಿಸಿ ಯುವಕರನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು.
Advertisement
Advertisement
ಇತ್ತೀಚೆಗೆ ಈ ಗ್ಯಾಂಗ್ ಆನೇಕಲ್ನ ಕಿರಣ್ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ಗ್ಯಾಂಗ್ನ ಯುವಕರು ಕಿರಣ್ನನ್ನು ಹೆದರಿಸಿ ಸುಲಿಗೆ ಮಾಡಿದ್ದರು. ಈ ವಿಚಾರವಾಗಿ ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.