– ಅಂಬಿ ಅಣ್ಣನ ಬಗ್ಗೆ ಎಷ್ಟು ಮಾತಾಡಿದ್ರೂ ಕಡಿಮೆನೇ ಅಂದ್ರು ರಾಕ್ಲೈನ್
– ಅಂಬಿ ಅಭಿಮಾನಿಗಳಿಗೆ ಅಭಿ ಧನ್ಯವಾದ
ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ 2 ವರ್ಷ. ಅವರ ಅಭಿಮಾನಿಗೆ ಕೂಡ ಇಂದು 2ನೇ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಇಂದು ಹೊಟ್ಟೆಗೌಡನದೊಡ್ಡಿಯ ತಿಮ್ಮಯ್ಯ ಅವರ ಸ್ಮರಣೆ ಮಾಡಲಾಯಿತು.
Advertisement
ಅಂಬರೀಶ್ ನಿಧನರಾದರೆಂದು ಅಂದೇ ಅವರ ಅಭಿಮಾನಿ ತಿಮ್ಮಯ್ಯ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲಿಗೆ ತಲೆಕೊಟ್ಟು ಅಂಬರೀಶ್ ಸಾವನ್ನಪ್ಪಿದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಇಂದು ಅಂಬಿ ಜೊತೆ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಪುಣ್ಯಸ್ಮರಣೆ ನೆರವೇರಿಸಲಾಯಿತು. ಇದನ್ನೂ ಓದಿ: ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್
Advertisement
Advertisement
ಬಳಿಕ ಮಾತನಾಡಿದ ನಟ ದೊಡ್ಡಣ, ವಿದ್ಯೆ ಕಲಿಯಬೇಕು, ಯಾರೂ ಕದಿಯೋಕೆ ಆಗಲ್ಲ. ಹಾಗೆಯೇ ಪ್ರೀತಿ, ಅಭಿಮಾನವನ್ನು ಕೂಡ ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ. ಆದರೆ ಆ ಅಭಿಮಾನವನ್ನು ಅಂಬರೀಶ್ ಅವರು ಕಿತ್ತುಕೊಂಡಿದ್ದಾರೆ. ಅಂಬರೀಶ್ ಅವರ ಪುತ್ಥಳಿ ಮಾಡಿರೋದು ಇಡೀ ವಿಶ್ವಕ್ಕೆ ಗೋತ್ತು. ಅಭಿಮಾನಿಗಳ ಪ್ರೀತಿ ಆಶೀರ್ವಾದ ಹೀಗೆ ಇರಲಿ. ಅಂಬರೀಶ್ ಅಣ್ಣ ಮತ್ತೆ ಹುಟ್ಟಿ ಬಂದರೆ ಹೊಟ್ಟೆಗೌಡನಹಳ್ಳಿಯಲ್ಲಿ ಹುಟ್ಟುತ್ತಾರೆ. ಅವರ ಪುತ್ಥಳಿ ಇರುವ ಇಲ್ಲಿ ಅವರು ಹುಟ್ಟಲಿ ಎಂದು ಕೇಳಿಕೊಳ್ಳುವುದಾಗಿ ತಿಳಿಸಿದರು. ಇದನ್ನೂ ಓದಿ: ಅಪ್ಪಾಜಿ ಬೈಯೋದನ್ನ ಯಾವತ್ತೂ ಮಿಸ್ ಮಾಡ್ಕೊತ್ತೀನಿ: ದಾಸ
Advertisement
ಇದೇ ವೇಳೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಅಂಬರೀಶ್ ಅಣ್ಣ ಅಂದ್ರೆ ಬರೀ ಮಂಡ್ಯ ಮಾತ್ರವಲ್ಲ ಇಂಡಿಯಾಗೆ ವಿಶ್ವಕ್ಕೆ ಗೊತ್ತು. ಅಂಬರೀಶ್ ಅಣ್ಣನ ಮಾತು ನಡವಳಿಕೆಯನ್ನು ಇಷ್ಟ ಪಡುವ ಜನ ಮಂಡ್ಯ ಹಾಗೂ ಇಂಡಿಯಾ ಜನ. ಮದ್ದೂರು ತಾಲೂಕು ಸಾಕಷ್ಟು ವಿಶೇಷ ತುಂಬಿದೆ. ಇಡೀ ವಿಶ್ವ ತಿರುಗಿ ನೋಡುವ ಕೆಲಸ ಮಾಡಿದ್ದಾರೆ ಈ ಜನ. ಪುತ್ಥಳಿಯ ಮೂಲಕ ಅಂಬರೀಶ್ ಅಣ್ಣನಿಗೆ ಅವರ ಕುಟುಂಬಕ್ಕೆ ಪ್ರೀತಿ ನೀಡಿದ್ದಾರೆ. ಅಂಬಿ ಅಣ್ಣನ ಬಗ್ಗೆ ಎಷ್ಟು ಮಾತಾಡಿದ್ದರು ಕಡಿಮೆ ಎಂದರು. ಇದನ್ನೂ ಓದಿ: ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್
ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿ, ನಾನು ವಾರಕ್ಕೆ ಒಂದು ಬಾರಿ ಈ ಕಡೆ ಬರ್ತಾ ಇರುತ್ತೇನೆ. ಆದರೆ ಇವತ್ತು ಬಂದಿದ್ದು ಮೊದಲ ಬಾರಿ ಬಂದ ಹಾಗೆ ಅನ್ನಿಸಿತು. ನೀವು ನೀಡಿದ ಸ್ವಾಗತ ತುಂಬಾ ಖುಷಿ ಆಯ್ತು. ಈ ಗ್ರಾಮದವರು ಮಾಡಿರುವ ಕೆಲಸಕ್ಕೆ ಪಾದಕ್ಕೆ ನಮಸ್ಕರಿಸುತ್ತೇನೆ. ನಿಮ್ಮ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆ. ಅಂಬರೀಶ್ ಅವರ ಮೇಲೆ ಮತ್ತೆ ನಮ್ಮ ಅಮ್ಮನ ಮೇಲೆ ನನ್ನ ಮೇಲೆ ಪ್ರೀತಿ ಇಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಿದರು.