ಬಿಗ್ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್ಬಾಸ್ ಮನೆಗೆ ವೈಲ್ಡ್ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.
Advertisement
ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.
Advertisement
Advertisement
ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.
Advertisement
ನಿನ್ನೆ ಬಿಗ್ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.
ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.