ಹೈದರಾಬಾದ್: ಎಂಬಿಎ ಪದವೀಧರನೊಬ್ಬ ತನ್ನ ಪ್ರಿಯತಮೆಯ ಚಿಕಿತ್ಸೆಗೆಂದು ಬರೋಬ್ಬರಿ 8.51 ಲಕ್ಷ ರೂಪಾಯಿ ಎಗರಿಸಿ ಪೊಲೀಸರ ಅತಿಥಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
28 ವರ್ಷದ ಯುವಕ ಬುಧವಾರ ತನ್ನ ಪ್ರಿಯತಮೆಯ ಚಿಕಿತ್ಸೆಗೆಂದು ಈ ಹಣವನ್ನು ಎಗರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಆರೋಪಿ ಯುವಕ ಪೇಪರ್ ಮಿಲ್ ನಲ್ಲಿ ಅಕೌಂಟೆಂಟ್ ಕಮ್ ಕಲೆಕ್ಷನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಹೀಗೆ ಹಲವು ಕಂಪನಿಗಳ ಏಜೆಂಟ್ ಗಳಿಂದ ಮೇ 25ರಂದು ಸುಮಾರು 8,51,950 ರೂ. ಕಲೆಕ್ಟ್ ಮಾಡಿದ್ದನು. ಈ ಹಣವನ್ನೇ ಎಗರಿಸಿ ಬಳಿಕ ದರೋಡೆ ಮಾಡಿದ್ದಾರೆಂಬ ಕಥೆ ಕಟ್ಟಿದ್ದನು.
Advertisement
ಯುವಕ ಪೊಲೀಸರ ಬಳಿ ಯಾರೋ ಹಣ ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ. ಆದರೆ ತನಿಖೆ ಸಂದರ್ಭದಲ್ಲಿ ಯುವಕನೇ ದರೋಡೆ ಮಾಡಲು ನಾಟಕ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆತನ ಬಳಿಯಿದ್ದ ಎಲ್ಲಾ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಯುವಕನಿಗೆ ಯುವತಿಯೊಬ್ಬಳ ಜೊತೆ ಪ್ರೇಮಾಂಕುರವಾಗಿದೆ. ಆದರೆ ಆಕೆಯ ಆರೋಗ್ಯದಲ್ಲಿ ಗಂಭೀರವಾದ ಸಮಸ್ಯೆಗಳಿದ್ದು, ಚಿಕಿತ್ಸೆ ಬೇಕಾಗುವಷ್ಟು ಹಣವಿರಲಿಲ್ಲ. ಹೀಗಾಗಿ ಕಳ್ಳತನ ಮಾಡಲು ಪ್ಲಾನ್ ಮಾಡಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.