ಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಮರ್ಡರ್ ಆಗಿದ್ದು, ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ಗುಂಡಿಮಾಳದಲ್ಲಿ ನಡೆದಿದೆ. ಇದನ್ನೂ ಓದಿ: ಸಿಡಿ ತನಿಖೆಯ ಎಸ್ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ
ಗ್ರಾಮದ ರಾಜಶೇಖರ್ ಮೃತನಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಶೌಚಾಲಯದ ಗುಂಡಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಿಯಕರನೊಡನೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಜಶೇಖರ್ ಪತ್ನಿ ನಂದಿನಿ ಮತ್ತು ಪ್ರಿಯಕರ ದಿನಕರ್ ಕೊಲೆ ಮಾಡಿದ್ದಾರೆಂದು ಹೇಳಲಾಗಿದ್ದು, ಹನೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Advertisement
Advertisement
ರಾಜಶೇಖರಮೂರ್ತಿ ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ. ನಿನ್ನೆ ಮನೆಯ ಶೌಚಾಲಯದ ಗುಂಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ರಾಜಶೇಖರಮೂರ್ತಿಯ ತಂದೆ ಹನೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಕ್ಕೆ ಭೇಟಿ ನೀಡಿ ಶೌಚಾಲಯ ಗುಂಡಿ ಓಪನ್ ಮಾಡಿಸಿದ ಪೊಲೀಸರಿಗೆ ಶಾಕ್ ಕಾದಿತ್ತು.
Advertisement
Advertisement
ಶೌಚ ಗುಂಡಿಯೊಳಗೆ ಕೈಕಾಲು ಕಟ್ಟಿ ತಲೆಕೆಳಕಾಗಿ ರಾಜಶೇಖರ ಮೂರ್ತಿ ಶವ ಬಿದ್ದಿತ್ತು.ಈ ಬಗ್ಗೆ ಹನೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.