ಮಂಗಳೂರು: ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜಿಲ್ಲೆಯ ಎಲ್ಲ ಜೀವನದಿಗಳು ಉಕ್ಕಿ ಹರಿಯುತ್ತಿವೆ. ಮಳೆ, ಪ್ರವಾಹದಿಂದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಅದೇ ರೀತಿ ಕೊಚ್ಚಿ ಹೋಗುತ್ತಿದ್ದ ಸೇತುವೆಯನ್ನು ಪ್ರಾಣದ ಹಂಗು ತೊರೆದು ಗ್ರಾಮಸ್ಥರೊಬ್ಬರು ಕಟ್ಟಿ ನಿಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯಲ್ಲಿ ಜನರೇ ನಿರ್ಮಿಸಿದ್ದ ಕಾಲು ಸೇತುವೆಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರೊಬ್ಬರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ರಭಸವಾಗಿ ಹರಿಯುವ ನದಿಯಲ್ಲಿ ಸಾಹಸ ಮೆರೆದಿದ್ದಾರೆ.
Advertisement
Advertisement
ದಿಡುಪೆ ಹಾಗೂ ಕಜಕೆ ಗ್ರಾಮವನ್ನು ಸಂಪರ್ಕಿಸುವ ಅಡಿಕೆ ಮರದ ತುಂಡುಗಳಿಂದ ನಿರ್ಮಿಸಿದ್ದ ಕಾಲು ಸೇತುವೆ ಪ್ರವಾಹದ ರಭಸಕ್ಕೆ ನೀರು ಪಾಲಾಗುವ ಭೀತಿಯಲ್ಲಿತ್ತು. ಸ್ಥಳೀಯರೊಬ್ಬರು ಹರಿಯುವ ಪ್ರವಾಹದ ನೀರಿನ ನಡುವೆ ಜೀವದ ಹಂಗು ತೊರೆದು ಕಾಲು ಸೇತುವೆಯನ್ನು ಕಟ್ಟಿ ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕಾಲು ಸೇತುವೆ ನೀರು ಪಾಲಾದರೆ ಎರಡು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಹೀಗಾಗಿ ಪ್ರಾಣದ ಹಂಗು ತೊರೆದು ಕಾಲು ಸೇತುವೆಯನ್ನು ಉಳಿಸಿ ಗ್ರಾಮಸ್ಥರ ಪ್ರಶಂಸಗೆ ಪಾತ್ರರಾಗಿದ್ದಾರೆ.