ವಾಷಿಂಗ್ಟನ್: ಏಳು ವರ್ಷದ ಪುಟ್ಟ ಪೋರನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆ ಹಾಗೂ ಸಹೋದರಿಯನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗುವ ಮೂಲಕ ಭೇಷ್ ಅನಿಸಿಕೊಂಡಿದ್ದಾನೆ.
ಚೇಸ್ ಪೌಸ್ಟ್ ಎಂಬ 7 ವರ್ಷದ ಬಾಲಕ ಫ್ಲೋರಿಡಾ ಪ್ರವಾಹದಲ್ಲಿ ತೇಲಿ ಹೋಗುತ್ತಿದ್ದ ತಂದೆ ತಂದೆ ಸ್ಟೀವನ್ ಹಾಗೂ ಸಹೋದರಿ 4 ವರ್ಷದ ಅಬಿಗೈಲ್ ಳನ್ನು ಅಪಾಯದಿಂದ ಪಾರು ಮಾಡಿದ್ದಾನೆ. ಸುಮಾರು 1 ಗಂಟೆಗಳ ಕಾಲ ಏಕಾಂಗಿಯಾಗಿ ಈಜಿ ಅಪ್ಪ-ಮಗಳನ್ನು ದಡ ಸೇರಿಸುವ ಪ್ರಯತ್ನ ಮಾಡುವ ಮೂಲಕ ದಿಟ್ಟತನ ತೋರಿದ್ದಾನೆ.
Advertisement
Advertisement
ಈ ಬಗ್ಗೆ ಸ್ಟೀವನ್ ಪ್ರತಿಕ್ರಿಯಿಸಿ, ಕ್ಷಣದಲ್ಲಿ ನನಗೆ ಏನಾಗುತ್ತಿದೆ ಎಂದು ತಿಳಿಯುತ್ತಿರಲಿಲ್ಲ. ಆದರೆ ನಾನು ಮಕ್ಕಳನ್ನು ಪ್ರೀತಿಸುತ್ತಿದೇನೆ ಎಂದು ಕಿರುಚಾಡಿದ್ದೇನೆ ಅಷ್ಟೇ ಎಂದರು.
Advertisement
ಸ್ಟೀವನ್ ಕುಟುಂಬ ಶುಕ್ರವಾರ ದೋಣಿಯಲ್ಲಿ ಚಲಿಸುತ್ತಾ ದಿನವನ್ನು ಎಂಜಾಯ್ ಮಾಡುತ್ತಿತ್ತು. ಈ ವೇಳೆ ಏಕಾಏಕಿಯಾಗಿ ತೀವ್ರ ಪ್ರವಾಹ ಎದುರಾಯಿತು. ಈ ವೇಳೆ ದೋಣಿ ಸಮೇತ ಕೊಚ್ಚಿ ಹೋಗುತ್ತಿದ್ದರು. ಆಗ ಚೇಸ್ ಮೊದಲು ಸಹೋದರಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
Advertisement
ನನಗೆ ನಿಜವಾಗಲೂ ಭಯ ಆಗಿತ್ತು ಎಂದು ಚೇಸ್ ಹೇಳಿದ್ದಾನೆ. ಮೊದಲು ನಾನು ಅವರಿಬ್ಬರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದೆ. ಆದರೆ ಇಬ್ಬರಿಂದ ನಾನೇ ದೂರಾದೆ. ಅಲ್ಲದೆ ಮಗಳು ನನ್ನ ಕೈ ತಪ್ಪಿ ತೇಲಿ ಹೋದಳು ಎಂದು ಸ್ಟೀವನ್ ವಿವರಿಸಿದ್ದಾರೆ. ಇತ್ತ ಅಪಾಯದ ಮುನ್ಸೂಚನೆ ಅರಿತ ಚೇಸ್ ಕೂಡಲೇ ನೀರಿಗೆ ಹಾರಿದ್ದಾನೆ. ಪ್ರವಾಹವನ್ನು ಹಿಮ್ಮೆಟ್ಟಿ ಗಂಟೆಗಳ ಕಾಲ ನೀರಿನಲ್ಲಿ ಈಜಾಡಿದ್ದಾನೆ. ದೋಣಿ ದಡದ ವಿರುದ್ಧ ದಿಕ್ಕಿನತ್ತ ಹೋಗುತ್ತಿತ್ತು. ಇದರಿಂದ ಈಜಾಡಲು ಕಷ್ಟಕರವಾಗಿತ್ತು ಎಂದಿದ್ದಾರೆ.
ಇತ್ತ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಂದೆ- ಮಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡರು. ಅಂತೆಯೇ ದೋಣಿ ಸಿಕ್ಕ ಕೆಲ ದೂರ ಇಬ್ಬರು ಸಿಕ್ಕಿದ್ದು, ರಕ್ಷಣೆ ಮಾಡಲಾಯಿತು.