ಬೆಂಗಳೂರು : ಲಾಕ್ಡೌನ್ ನಿಂದ ಬಸ್ ಪಾಸ್ ಅವಧಿ ಕಳೆದುಕೊಂಡಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ನಾಳೆಯಿಂದ ಬಿಎಂಟಿಸಿ ಬಸ್ ರಸ್ತೆಗೆ ಇಳಿಯಲಿದ್ದು, ಏಪ್ರಿಲ್ ತಿಂಗಳಲ್ಲಿ ಆದ ಬಸ್ ಪಾಸ್ ನಷ್ಟವನ್ನ ಪ್ರಯಾಣಿಕರಿಗೆ ತುಂಬಿಸಿಕೊಡಲು ಆದೇಶ ಹೊರಡಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಪ್ರಯಾಣಿಕರಿಗೆ ಮಾಹಿತಿ ನೀಡಿದೆ.
Advertisement
ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿದೆ. ದಿನಾಂಕ 07.04.2021 ರಿಂದ ಸಂಸ್ಥೆಯ ಕೆಲವು ಚಾಲನಾ ಸಿಬ್ಬಂದಿಗಳು ಮುಷ್ಕರವನ್ನು ನಡೆಸಿದ್ದು ದಿನಾಂಕ 21.04.2021 ರವರೆಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯವಾದ್ದರಿಂದ, ಏಪ್ರಿಲ್-2021 ರ ಮಾಹೆಯ ಮಾಸಿಕ ಪಾಸಗಳ ಮಾನ್ಯತಾ ಅವಧಿಯನ್ನು ದಿನಾಂಕ 16.05.2021 ರವರೆಗೆ ಉಲ್ಲೇಖ-01 ರ ಸುತ್ತೋಲೆಯಂತೆ ವಿಸ್ತರಿಸಲಾಗಿತ್ತು.
Advertisement
Advertisement
ರಾಜ್ಯದಲ್ಲಿ ನಿಯಂತ್ರಣ ಮೀರಿ ಹರಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಹಾಗೂ ಸೋಂಕಿನ ಸರಪಳಿಯನ್ನು ಮುರಿಯಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೊಳಿಸಿರುತ್ತದೆ. ಅದರನ್ವಯ ಸಂಸ್ಥೆಯು ದಿನಾಂಕ ಏಪ್ರಿಲ್ 20, 2021 ರಿಂದ ಜೂನ್ 20, 2021 ರವರೆಗೆ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿರುತ್ತದೆ.
Advertisement
ಮುಂದುವರೆದು, ಏಪ್ರಿಲ್-2021 ಮಾನೆಯಲ್ಲಿ ಮಾಸಿಕ ಪಾಸುಗಳನ್ನು ಪಡೆದಂತಹ ಸಾರ್ವಜನಿಕ ಪ್ರಯಾಣಿಕರು ಮುಷ್ಕರದ ಅವಧಿ ಹಾಗೂ ಕೋವಿಡ್ – 19 ನಿರ್ಬಂಧಿತ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಬಳಕೆ ಮಾಡದೇ ಇರುವ ಕಾರಣ, ಏಪ್ರಿಲ್-2021 ಮಹಯ ಸಾಮಾನ್ಯ ಮಾಸಿಕ ಸಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್ಗಳ ಮಾನ್ಯತಾ ಅವಧಿಯನ್ನು (ಸಂಸ್ಥೆಯ ಗುರುತಿನ ಚೀಟಿಯೊಂದಿಗೆ) ದಿನಾಂಕ 08.07.2011 ರವರೆಗೆ ವಿಸ್ತರಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.