ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಟಾಲಿವುಡ್ ಬಹು ನಿರೀಕ್ಷಿತ ಸಲಾರ್ ಸಿನಿಮಾದ ಮುಹೂರ್ತ ಇಂದು ಹೈದರಾಬಾದ್ನಲ್ಲಿ ನೆರವೇರಿತು.
Advertisement
ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಶ್ ಇಂದು ಬೆಳಗ್ಗೆ ಹೈದರಾಬಾದ್ಗೆ ಆಗಮಿಸಿದ್ದರು.
Advertisement
Advertisement
ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
Advertisement
ಮುಹೂರ್ತ ಪೂಜೆಯ ಸಮಯದಲ್ಲಿ ಯಶ್ ಮತ್ತು ಪ್ರಭಾಸ್ ಒಟ್ಟಿಗೆ ನಿಂತು ಪೋಸ್ ನೀಡಿದ್ದಾರೆ.