-4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ
ಮುಂಬೈ: ಮದುವೆಯ ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿಯ ಕೊಲೆಗೆ ಭಗ್ನ ಪ್ರೇಮಿ ಯತ್ನಿಸಿರುವ ಘಟನೆ ಮುಂಬೈನ ಖಾರ್ ಸೊಸೈಟಿಯಲ್ಲಿ ನಡೆದಿದೆ.
24 ವರ್ಷದ ಮೊಹ್ಮದ್ ಜಹಂಗೀರ್ ಫಾರೂಖ್ ಗೆಳತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಫಾರೂಕ್ ಖಾರ್ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿಯ 19 ವರ್ಷದ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಖಾರ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಗಜಾನನ ಕಾಬ್ದೂಲೆ, ಯುವಕ ಫಾರೂಕ್ ಕೆಲ ತಿಂಗಳ ಹಿಂದೆ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದನು. ಆದ್ರೆ ಯುವತಿ ಈತನ ಪ್ರಪೋಸಲ್ ತಿರಸ್ಕರಿಸಿದ್ದಳು. ಭಾನುವಾರ ರಾತ್ರಿ ಸುಮಾರು 12.30ಕ್ಕೆ ಯುವತಿಗೆ ಕರೆ ಮಾಡಿ ಟೆರೇಸ್ ಗೆ ಬರುವಂತೆ ಹೇಳಿದ್ದಾನೆ. ಯುವತಿ ಬಂದ ಕೂಡಲೇ ಮದುವೆಯಾಗುವಂತೆ ಪೀಡಿಸಿದ್ದಾನೆ. ಎರಡನೇ ಬಾರಿಯೂ ಫಾರೂಕ್ ಪ್ರಪೋಸಲ್ ಯುವತಿ ರಿಜೆಕ್ಟ್ ಮಾಡಿದ್ದಾಳೆ.
Advertisement
Advertisement
ಪ್ರಪೋಸಲ್ ರಿಜೆಕ್ಟ್ ಮಾಡಿದ್ದಕ್ಕೆ ಕೋಪಗೊಂಡ ಫಾರೂಕ್, ಚಾಕುವಿನಿಂದ ನಾಲ್ಕರಿಂದ ಐದು ಬಾರಿ ಆಕೆಗೆ ಚುಚ್ಚಿದ್ದಾನೆ. ನಂತರ ಸುತ್ತಿಗೆಯಿಂದಲೂ ಹಲ್ಲೆ ನಡೆಸುತ್ತಿದ್ದಂತೆ ಯುವತಿ ಆತನಿಂದ ತಪ್ಪಿಸಿಕೊಂಡಿದ್ದಾಳೆ. ಇತ್ತ ಭಯಗೊಂಡ ಫಾರೂಖ್ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ಗಜಾನನ ಕಾಬ್ದೂಲೆ ಹೇಳುತ್ತಾರೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನು ನಗರದ ಸಿಯಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆಗೆ ಬಳಸಲಾದ ಚಾಕು ಮತ್ತು ಸುತ್ತಿಗೆ ವಶಪಡಿಸಿಕೊಂಡಿದ್ದಾರೆ.