ನವದೆಹಲಿ: ಒಲಿಂಪಿಕ್ಸ್ ಗೆಲ್ಲಲು ಯುವ ಸೈನಿಕರಿಗೆ ಸೂಕ್ತ ತರಬೇತಿ ನೀಡಿದರೆ 8-10 ಚಿನ್ನದ ಪದಕಗಳು ಭಾರತಕ್ಕೆ ಲಭಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೀಗ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಹೀಗಾಗಿ ಪ್ರಧಾನಿ ಮೋದಿಯವರ ಹಳೆಯ ಭಾಷಣದ ವೀಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Advertisement
ಪ್ರಧಾನಿ ಮೋದಿ ಹಿಂದೆ ಭಾಷಣ ಮಾಡಿದ್ದ ವೀಡಿಯೋ ಇದೀಗ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವ ಸೈನಿಕರಿಗೆ ಒಲಿಂಪಿಕ್ಸ್ಗೆ ತರಬೇತಿ ನೀಡಿದರೆ ಭಾರತಕ್ಕೆ 9, 10 ಚಿನ್ನದ ಪದಕಗಳು ಬರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. 2013ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪುಣೆಯ ಫರ್ಗುಸನ್ ಕಾಲೇಜ್ನಲ್ಲಿ ಭಾಷಣ ಮಾಡಿದ್ದರು. ಇದೀಗ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರ ಭವಿಷ್ಯವಾಣಿಯನ್ನು ನಿಜವಾಗಿಸಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದನ್ನೂ ಓದಿ: ಚಿನ್ನದ ನೀರಜ್ಗೆ ಪ್ರಶಂಸೆಯ ಮಹಾಪೂರ – ಸರ್ಕಾರಗಳಿಂದ ಬಹುಮಾನಗಳ ಸುರಿಮಳೆ
Advertisement
Advertisement
ಭಾಷಣದಲ್ಲಿ ಏನು ಮಾತನಾಡಿದ್ದಾರೆ?
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಪುಣೆಯ ಫರ್ಗುಸನ್ ಕಾಲೇಜ್ನಲ್ಲಿ ಭಾಷಣ ಮಾಡಿದ್ದು, ನಾವು ಒಲಿಂಪಿಕ್ಸ್ ಹೆಚ್ಚು ಪದಕ ಗೆಲ್ಲಬೇಕಾದರೆ ನಮ್ಮ ಯುವ ಸೈನಿಕರಿಗೆ ಸರಿಯಾದ ತರಬೇತಿ ನೀಡಬೇಕು. ಸೈನಿಕರು ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದರೆ 8-10 ಚಿನ್ನದ ಪದಕಗಳನ್ನು ಗಲ್ಲುತ್ತಾರೆ ಎಂದು ಮೋದಿ ಹೇಳಿದ್ದರು. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ
Advertisement
ಆ ಭವಿಷ್ಯವಾಣಿಯನ್ನು ಇದೀಗ ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೂಪ್ರಾ ನಿಜವಾಗಿಸಿದ್ದಾರೆ. ಅಲ್ಲದೆ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಎಲ್ಲ 228 ಮಂದಿಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ಕ್ರೀಡಾಪಟುಗಳ ಜೊತೆ ಮಾತನಾಡಿದ್ದಾರೆ.