– ಅತ್ತೆಯ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೊಸೆ
ಪಾಟ್ನಾ: ಅತ್ತೆಗೆ ಚಾಕುವಿನಿಂದ ಇರಿದು ಕಣ್ಣು ಕಿತ್ತು ಕೊಲೆ ಮಾಡಿದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ಪರ್ಸಾ ಬಜಾರ್ ಗ್ರಾಮದಲ್ಲಿ ನಡೆದಿದೆ.
ಸೊಸೆಯಿಂದ ಹತ್ಯೆಗೊಳಗಾದ ಅತ್ತೆಯನ್ನು ಧರ್ಮಶೀಲ ದೇವಿ ಎಂದು ಗುರುತಿಸಲಾಗಿದೆ. ಅತ್ತೆಯನ್ನು ಹತ್ಯೆಗೈದ ಆರೋಪಿ ಸೊಸೆ ಲಲಿತಾ(33) ಆಗಿದ್ದಾಳೆ. ಮಗು ಇಲ್ಲ ಎಂದು ಮನಬಂದಂತೆ ಮಾತಾಡುತ್ತಿದ್ದ ಅತ್ತೆಯ ಮಾತಿನಿಂದ ಮನನೊಂದ ಸೊಸೆ ಈ ಕೃತ್ಯ ಎಸಗಿದ್ದಾಳೆ.
Advertisement
Advertisement
Advertisement
ಅತ್ತೆ ಚುಚ್ಚು ಮಾತುಗಳಿಂದ ಪ್ರತಿನಿತ್ಯ ಸೊಸೆಗೆ ಕಿರುಕುಳವನ್ನು ನೀಡುತ್ತಿದ್ದಳು. ಮಗುವಾಗಿಲ್ಲ ಎಂಬ ಕೊರಗು ಲಲಿತಾಳಿಗೆ ಇತ್ತು. ಅತ್ತೆಯ ಮಾತುಗಳು ಇನ್ನಷ್ಟು ನೋವನ್ನುಂಟು ಮಾಡುತ್ತಿದ್ದವು. ಈ ಎಲ್ಲಾ ವಿಚಾರದಿಂದ ಮನನೊಂದ ಮಹಿಳೆ ಪತಿ ಮತ್ತು ಮಾವ ಇಲ್ಲದ ಸಮಯವನ್ನು ನೋಡಿಕೊಂಡು ಅತ್ತೆಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು.
Advertisement
ಅತ್ತೆಗೆ ಚಾಕುವಿನಿಂದ ಇರಿದು, ಕಣ್ಣುಗಳನ್ನು ಕಿತ್ತು ಹೊರಗೆ ಎಳೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಇದಾದ ಬಳಿಕ ಸುಮ್ಮನಾಗದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ನೆರೆಹೊರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ.