ನವದೆಹಲಿ: ‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಾಲಿವುಡ್ ನಟ ಸೋನುಸೂದ್ ಅವರ ಲಾಕ್ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಅನುಭವವನ್ನು ವಿವರಿಸುವ ಪುಸ್ತಕವನ್ನು ಬರೆಯುತ್ತಿದ್ದೇನೆ ಎಂದು ಈ ಹಿಂದೆ ಸೋನುಸೂದ್ ಹೇಳಿದ್ದರು. ಲಾಕ್ಡೌನ್ನಲ್ಲಿ ಸಹಾಯವನ್ನು ನೀಡುವಾಗ ನಟ ಎದುರಿಸಿದ ಭಾವನಾತ್ಮಕ ಸವಾಲುಗಳನ್ನು ಮತ್ತು ಅನುಭವಗಳನ್ನು ‘ಐ ಆಮ್ ನಾಟ್ ಎ ಮೈಸೆ’ ಈ ಪುಸ್ತಕ ಒಳಗೊಂಡಿರುತ್ತದೆ.
Advertisement
ಕೆಲವರು ನನ್ನನ್ನು ಪ್ರೀತಿಯಿಂದ ವಲಸೆ ಕಾರ್ಮಿಕರ ಪಾಲಿನ ದೇವದೂತ ಎಂದು ಕರೆದರು. ಆದರೆ ನಾನು ನಿಜಕ್ಕೂ ದೇವದೂತನಲ್ಲ ನನ್ನ ಹೃದಯ ನನಗೆ ಹೇಳುವುದನ್ನು ನಾನು ಸರಳವಾಗಿ ಮಾಡುತ್ತೇನೆ. ಲಾಕ್ಡೌನ್ ನಿಂದಾಗಿ ಸಾವಿರಾರು ಜನ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಬೇಕು ಎಂದು ನನ್ನ ಮನಸ್ಸು ಹೇಳಿತು ಎಂದರು.
Advertisement
ಪರಸ್ಪರ ಸಹಾಯ ಮಾಡುವುದು ಮಾನವರಾಗಿ ನಮ್ಮ ಜವಾಬ್ದಾರಿಯಾಗಿದೆ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನನ್ನ ದೇವದೂತ ಎನ್ನುವುದು ದೊಡ್ಡ ಮಾತಾಗಿದೆ. ಈ ಎಲ್ಲ ಅನುಭವಗಳನ್ನು ಹೊಂದಿರುವ ಪುಸ್ತಕ ‘ಐ ಆಮ್ ನೋ ಮೆಸೈ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ನಟ ಸೋನುಸೋದ್ ತಿಳಿಸಿದ್ದಾರೆ.
Advertisement