– ಪ್ಲೇ ಆಫ್ಗಾಗಿ ನೆಟ್ ರನ್ರೇಟ್ ಕಾಯಬೇಕಾದ ಪರಿಸ್ಥಿತಿಯಲ್ಲಿ ಕೋಲ್ಕತ್ತಾ
ದುಬೈ: ಇಂದು ನಡೆದ ಬೊಂಬಾಟ್ ಭಾನುವಾರದ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 60 ರನ್ಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಸದ್ಯ ಪ್ಲೇ ಆಫ್ಗಾಗಿ ಕೋಲ್ಕತ್ತಾ ನೆಟ್ ರನ್ರೇಟಿಗಾಗಿ ಕಾಯಬೇಕಿದೆ.
ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 54ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಾಯಕ ಇಯೊನ್ ಮೋರ್ಗಾನ್ ಅವರು ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 191 ರನ್ ಭಾರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ಮತ್ತು ವರುಣ್ ಚಕ್ರವರ್ತಿ ಅವರ ಬೌಲಿಂಗ್ ದಾಳಿಗೆ ನಲುಗಿ ಸೋಲನ್ನು ಒಪ್ಪಿಕೊಂಡಿತು.
Advertisement
#KKR win by 60 runs to keep their hopes alive in #Dream11IPL 2020. pic.twitter.com/aISfVK98zJ
— IndianPremierLeague (@IPL) November 1, 2020
Advertisement
ಕಮ್ಮಿನ್ಸ್, ಚಕ್ರವರ್ತಿ ಬೌಲಿಂಗ್ ಆಟ್ಯಾಕ್
ಇಂದು ಕೋಲ್ಕತ್ತಾ ತಂಡ ಬ್ಯಾಟಿಂಗ್ ರೀತಿಯಲ್ಲೇ ಬೌಲಿಂಗ್ನಲ್ಲೂ ಕೂಡ ಮೋಡಿ ಮಾಡಿತು. ಆರಂಭದಿಂದಲೇ ದಾಳಿ ಮಾಡಿದ ವೇಗಿ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಪಡೆದು, 34 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ವರುಣ್ ಚಕ್ರವರ್ತಿ 4 ಓವರ್ ಬೌಲ್ ಮಾಡಿ 20 ರನ್ ನೀಡಿ ಎರಡು ವಿಕೆಟ್ ಕಿತ್ತರು. ಅಂತಯೇ ಶಿವಂ ಮಾವಿ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
Advertisement
Varun Chakravarthy gets another wicket. Tewatia departs for 31.
Live – https://t.co/loiysIghUH #Dream11IPL pic.twitter.com/KENigluxDx
— IndianPremierLeague (@IPL) November 1, 2020
Advertisement
ಕೋಲ್ಕತಾ ನೈಟ್ ರೈಡರ್ಸ್ ನೀಡದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಂದ ರಾಜಸ್ಥಾನ್ ರಾಯಲ್ಸ್ ಗೆ ಕೋಲ್ಕತ್ತಾ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಆರು ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಬೆನ್ ಸ್ಟೋಕ್ಸ್ ಮತ್ತು ಸ್ಟೀವನ್ ಸ್ಮಿತ್ ಜೊತೆಯಾಗಿ ಉತ್ತಮ ಇನ್ನಿಂಗ್ಸ್ ಕಟ್ಟುವ ತವಕದಲ್ಲಿದ್ದರು. ಆದರೆ ಮತ್ತೆ ದಾಳಿಗೆ ಬಂದ ಪ್ಯಾಟ್ ಕಮ್ಮಿನ್ಸ್ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. 18 ರನ್ಗಳಿಸಿದ್ದ ಸ್ಟೋಕ್ಸ್ ದಿನೇಶ್ ಕಾರ್ತಿಕ್ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾದರು.
WATCH – DK takes flight – catch unbelievable
Take a bow @DineshKarthik. Went full stretch to his left and grabbed a stunner. Terrific catch from DK. You can watch this over and over again.https://t.co/5ijCHFAzDm #Dream11IPL
— IndianPremierLeague (@IPL) November 1, 2020
ಆ ನಂತರ ನಾಯಕ ಸ್ಟೀವನ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಬೌಲ್ಡ್ ಆದರು. ನಂತರದ ಓವರಿನಲ್ಲಿ ಸಂಜು ಸ್ಯಾಮ್ಸನ್ ಅವರು ಶಿವಂ ಮಾವಿಗೆ ಔಟ್ ಆದರು. ಈ ಮೂಲಕ ಅರ್ಧ ಪವರ್ ಪ್ಲೇಯಲ್ಲೇ ರಾಜಸ್ಥಾನ್ ತನ್ನ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ಬಂದ ರಿಯಾನ್ ಪರಾಗ್ ಏಳು ಬಾಲ್ ಆಡಿ ಸೊನ್ನೆ ಸುತ್ತಿ ಹೊರನಡೆದರು. ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಐದು ವಿಕೆಟ್ ಕಳೆದುಕೊಂಡು 41 ರನ್ ಗಳಸಿತು.
#RR lose 5 wickets in the powerplay with 41 runs on the board.#Dream11IPL pic.twitter.com/ALHqNzFjgJ
— IndianPremierLeague (@IPL) November 1, 2020
ನಂತರ ಬಟ್ಲರ್ ಮತ್ತು ತಿವಾಟಿಯಾ ಉತ್ತಮವಾಗಿ ಆಡಿದ್ದರು. ಆದರೆ 10ನೇ ಓವರ್ ನಾಲ್ಕನೇ ಬಾಲಿನಲ್ಲಿ 22 ಬಾಲಿಗೆ 35 ರನ್ಗಳಿಸಿದ್ದ ಜೋಸ್ ಬಟ್ಲರ್ ಅವರು ಔಟ್ ಆದರು. ನಂತರ ರಾಹುಲ್ ತಿವಾಟಿಯಾ ಅವರು ಕೂಡ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಕ್ಯಾಚ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಕೂಡ ಕಮಲೇಶ್ ನಾಗರಕೋಟಿ ಅವರ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕಾರ್ತಿಕ್ ತ್ಯಾಗಿ ಅವರು ಕ್ಯಾಚ್ ನೀಡಿದರು.