ಬೆಂಗಳೂರು: ಮನೆಯ ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಧೈರ್ಯವಾಗಿ ದೂರು ನೀಡಿ ಯುವತಿ ಆರೋಪಿಗೆ ಬುದ್ಧಿ ಕಲಿಸಿರುವ ಘಟನೆ ನಗರದ ಕೋರಮಂಗಲದಲ್ಲಿ ನಡೆದಿದೆ.
ನಗರದ ಕೋರಮಂಗಲ ನಿವಾಸಿಯಾಗಿರುವ ನೂಪುರ್ ಸರಸ್ವತ್ ಅವರು ನವೆಂಬರ್ 8 ರಂದು ಸಾಮಾಜಿಕ ಜಾಲತಾಣ ಇನ್ಸ್ಟಾದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಆತನ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದ ಅವರು, ಘಟನೆಯ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿದ್ದರು.
Advertisement
Advertisement
ನೂಪುರ್ ಅವರು ಒಂದು ತಿಂಗಳ ಹಿಂದೆಯಷ್ಟೇ ಕೊರಮಂಗಲದ ಅಪಾರ್ಟ್ಮೆಂಟ್ ಒಂದಕ್ಕೆ ವಾಸಸ್ಥಳವನ್ನು ಬದಲಿಸಿದ್ದರು. ಹೀಗೆ ಒಮ್ಮೆ ಇವರು ಮನೆಯಲ್ಲಿದ್ದ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಪಕ್ಕದ ಬಿಲ್ಡಿಂಗ್ನಲ್ಲಿದ್ದ ಯುವಕ ಟೆರೇಸ್ ಮೇಲೆ ನಿಂತು ಸುಮಾರು 1 ಗಂಟೆಗೂ ಹೆಚ್ಚು ಮನೆಯ ಇವರನ್ನೇ ನೋಡುತ್ತಾ ನಿಂತ್ತಿದ್ದ. ಇವರು ವಾಸಿಸುತ್ತಿದ್ದ ನಿವಾಸದ ಕಿಟಕಿಯಿಂದ ಆತ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
Advertisement
ಈ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿರುವ ನೂಪುರ್, ಆತನ ವರ್ತನೆ ನನಗೆ ಮುಜುಗರವನ್ನು ಉಂಟು ಮಾಡಿತ್ತು. ಆ ವೇಳೆ ನನಗೆ ಎರಡು ಅಂಶಗಳು ತಲೆಗೆ ಬಂದಿತ್ತು. ಮೊದಲು ಇದನ್ನು ಸಹಿಸಿಕೊಂಡು ಸುಮ್ಮನೆ ಕೂಡಬಾರದು. ಎರಡನೇಯದ್ದು, ಆತನಿಗೆ ನಾನು ವಾಸಿಸುವ ಮನೆ ಮಾಹಿತಿ ಎಂಬುದು ನನಗೆ ಹೆದರಿಕೆಯ ಭಾವನೆಯನ್ನು ಉಂಟು ಮಾಡಿತ್ತು. ಇದರಿಂದ ನಾನು ಆತನಿಗೆ ಬೈದು ಕೂಗಾಡಿದ್ದೆ. ಕೂಡಲೇ ಆತ ತನ್ನ ಪ್ಯಾಟ್ ಬಿಚ್ಚಿ ನನ್ನ ಕಡೆ ಅಸಹ್ಯವಾಗಿ ನಗು ಬೀರಿದ್ದ. ನಾನು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿ ಕ್ಯಾಮೆರಾ ತೆಗೆದುಕೊಂಡೆ. ಆ ವೇಳೆಗೆ ಆತ ಪ್ಯಾಟ್ ಹಾಕಿಕೊಂಡು ಅಲ್ಲಿಯೇ ನನ್ನನ್ನು ನೋಡುತ್ತಾ ನಿಂತಿದ್ದ ಎಂದು ಬರೆದುಕೊಂಡಿದ್ದಾರೆ.
Advertisement
ಯುವನಿಗೆ ಬುದ್ಧಿ ಕಲಿಸಲು ಮುಂದಾದ ನೂಪುರ್ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದರು. ಆದರೆ ಮಾಲೀಕರು ನೂಪುರ್ ಅವರಿಗೆ ಕರುಣೆಯಿಂದ ನೋಡಿ ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದರು. ಇತ್ತ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ನೂಪುರ್, ತನಗಾದ ಆಘಾತಕಾರಿ ಅನುಭವವನ್ನು ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಕೀಲರು, ಮಹಿಳಾ ಸಹಾಯವಾಣಿ ಹಾಗೂ ಸ್ನೇಹಿತ ನೆರವು ಕೋರಿದ್ದರು.
ಈ ವೇಳೆ ಕೆಲವರು ಯುವಕನ ವರ್ತನೆಯನ್ನು ಖಂಡಿಸಿದ್ದ ಹಲವರು ಆತನ ಕೃತ್ಯ ಶಿಕ್ಷಾರ್ಹ ಅಪರಾಧ ಎಂದು ಕಾಮೆಂಟ್ ಮಾಡಿದ್ದರು. ಮತ್ತೆ ಕೆಲವರು ನೋಡಿಯೂ ನೋಡದಂತೆ ಮುಂದೆ ಸಾಗುವಂತೆ ಸಲಹೆ ನೀಡಿದ್ದರು. ಈ ನಡುವೆ ಹಲವು ಮಹಿಳೆಯರು ಇದೇ ರೀತಿಯ ಅನುಭವಗಳನ್ನು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಅನುಭವಿಸಿದ್ದಾರೆ ಎಂದು ನೂಪುರ್ ಅರಿತುಕೊಂಡಿದ್ದರು. ಇದರಿಂದ ಇಂತಹ ಆರೋಪಿಗಳ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದ್ದ ಅವರು, ನವೆಂಬರ್ 9 ರಂದು ಕೋರಮಂಗಲ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಿವೇಕ್ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಆರೋಪಿಯನ್ನು ಗುರುತಿಸಿ ಬಂಧಿಸಿದ್ದರು. ಪೊಲೀಸ್ ಠಾಣೆಗೆ ತೆರಳಿದ್ದ ನೂಪುರ್ ಅವರು ಆರೋಪಿಯ ವಿರುದ್ಧ ದೂರು ಕೂಡ ದಾಖಲಿಸಿದ್ದರು.
ನೂಪುರ್ ದಿಟ್ಟ ತನವನ್ನು ತಿಳಿದಿ ಸ್ಥಳೀಯ ನಿವಾಸಿಗಳು ಅವರಿಗೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನೂಪುರ್ ಅವರ ಬಿಲ್ಡಿಂಗ್ನ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಕೂಡ ನೂಪುರ್ ಅವರ ಬಳಿ ಬಂದು, ಆಕೆಯ 15 ವರ್ಷದ ಮಗಳೊಂದಿಗೆ ಕೂಡ ಇದೇ ರೀತಿ ವರ್ತಿಸಿದ್ದಾಗಿ ತಿಳಿಸಿದ್ದರು. ಆರೋಪಿಯ ವರ್ತನೆ ಬೆದರಿದ್ದ ಅಮ್ಮ, ಮಗಳು ಬಿಲ್ಡಿಂಗ್ನ ಟೆರೇಸ್ಗೆ ತೆರಳುವುದನ್ನೇ ಬಿಟ್ಟಿದ್ದರು.
ಮೊದಲು ಆರೋಪಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಪೊಲೀಸರು ನೂಪುರ್ ಅವರಿಗೆ ತಿಳಿಸಿದ್ದರು. ಅಲ್ಲದೇ ಪ್ರಕರಣದ ಸಂಬಂಧ ವಕೀಲರನ್ನು ಭೇಟಿ ಮಾಡಲು ಸಲಹೆ ನೀಡಿದ್ದರು. ಆದರೆ ಇದು ಸುದೀರ್ಘ ಪ್ರಕ್ರಿಯೆ ಆಗಿರುವ ಅವರು ಇದರಿಂದ ಹೊರಗೆ ಬರಲು ನಿರ್ಧರಿಸಿದ್ದರು. ಎರಡು ದಿನಗಳ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೂಪುರ್, ಇಂತಹ ಸಂದರ್ಭದಲ್ಲಿ ಮೌನವಾಗಿರಬಾರದು. ನಿಮಗೆ ಕಿರುಕುಳವಾಗುತ್ತಿದ್ದರೆ ಧ್ವನಿ ಎತ್ತಿ ಇತರರಿಗೆ ತಿಳಿಸಿ ಸಹಾಯ ಪಡೆಯಿರಿ ಎಂದು ತಿಳಿಸಿದ್ದಾರೆ. ಸದ್ಯ ಯುವಕನನ್ನು ಪೊಲೀಸರು ಬಿಡುಗಡೆ ಮಾಡಿದ್ದರೂ, ಶೀಘ್ರವೇ ಅವನನ್ನು ಮನೆಯಿಂದ ಹೊರ ಹಾಕುವುದಾಗಿ ಮಾಲೀಕರು ತಿಳಿಸಿದ್ದಾಗಿ ಹೇಳಿದ್ದಾರೆ.