-ಓರ್ವ ಸಾವು, ನಾಲ್ವರು ಪಾರು
ದಿಸ್ಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ ಐವರು ಗೆಳೆಯರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಅಸ್ಸಾಂ ರಾಜ್ಯದ ಕಮಪುರ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿದೆ.
ಖೇಮಪುರದ ಠಾಣಾ ವ್ಯಾಪ್ತಿಯ ಅಂತರ್ಗತ ತೆತಲಿಸಾರಾ ಗ್ರಾಮದ ದೇವಾಶೀಷ ಮೃತ ಯುವಕ. ಸೆಪ್ಟೆಂಬರ್ 12ರಂದು ದೇವಾಶೀಷ ನಾಪತ್ತೆಯಾಗಿದ್ದನು. ಪೊಲೀಸರ ತಂಡ ಸೆಪ್ಟೆಂಬರ್ 12ರಿಂದ ದೇವಾಶೀಷ ಮತ್ತು ಆತನ ನಾಲ್ವರು ಗೆಳೆಯರನ್ನ ಹಿಂಬಾಲಿಸುತ್ತಿದ್ದರು. ದೇವಾಶೀಷ ಮತ್ತು ಆತನ ಗೆಳೆಯರು ದೇವಸ್ಥಾನದಲ್ಲಿ ನಶೆ ಪದಾರ್ಥ ಸೇವಿಸುತ್ತಿದ್ದರು.
Advertisement
ಪೊಲೀಸರು ಬರುತ್ತಿರುವ ವಿಷಯ ತಿಳಿದು ದೇವಾಶೀಷ ಹಾಗೂ ಗೆಳೆಯರು ನಶೆಯಲ್ಲಿ ನದಿಗೆ ಧಮುಕಿದ್ದಾರೆ. ನಾಲ್ವರು ದಡ ಸೇರುವಲ್ಲಿ ಯಶಸ್ವಿಯಾದ್ರೆ, ದೇವಾಶೀಷ ಈಜಲು ಆಗದೇ ಮುಳುಗಿದ್ದಾನೆ. ಸೋಮವಾರ ಎಸ್ಡಿಆರ್ಎಫ್ ತಂಡ ದೇವಾಶೀಷ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಗಿದೆ. ದೇವಾಲಯದಲ್ಲಿ ಯುವಕರನ್ನು ಪೊಲೀಸರು ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.