ಬೆಂಗಳೂರು: ಚಿಕ್ಕಪೇಟೆಯಲ್ಲಿ ಪೊಲೀಸರೊಂದಿಗೆ ಮಹಿಳೆ ರಾದ್ಧಾಂತ ಮಾಡಿ, ಪೊಲೀಸಪ್ಪನ ಕೈಯನ್ನೇ ಕಚ್ಚಿದ ಘಟನೆ ನಡೆದಿದೆ.
Advertisement
ಚಿಕ್ಕಪೇಟೆಯಲ್ಲಿ ಶಾಪಿಂಗ್ಗೆ ಬಂದಿದ್ದ ಮಹಿಳೆ, ಫುಟ್ಪಾತ್ ಮೇಲಿನ ಅಂಗಡಿಗಳನ್ನು ಪೊಲೀಸರು ತೆರವು ಮಾಡಿಸಿ, ವಾರ್ನ್ ಮಾಡಿದ್ದಳು. ಈ ವೇಳೆ ಮಹಿಳೆ ಜನರಿಗೆ ಯಾಕೆ ಸಮಸ್ಯೆ ಮಾಡುತ್ತೀರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ.
Advertisement
Advertisement
ರಾದ್ಧಾಂತ ಮಾಡಿ, ಗಲಾಟೆ ಮಾಡಿಕೊಂಡಿದ್ದು, ಪೊಲೀಸರನ್ನೇ ವೀಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದಳು. ಈ ವೇಳೆ ಮೊಬೈಲ್ ಕೊಡಿ ಎಂದು ಪೊಲೀಸರು ಕೇಳಿದಾಗ, ಪೊಲೀಸ್ ಪೇದೆಯ ಕೈಯನ್ನ ಮಹಿಳೆ ಕಚ್ಚಿದ್ದಾಳೆ. ಪೊಲೀಸ್ ಪೇದೆಯ ಕೈ ಕಚ್ಚಿದ ಮಹಿಳೆಯನ್ನು ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆದೊಯ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.