ವಿಜಯಪುರ: ಪುಲ್ವಾಮಾದಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ವಿಜಯಪುರದ ಯೋಧ ಕಾಶೀರಾಯ್ ಬೊಮ್ಮನಹಳ್ಳಿ (35) ಹುತಾತ್ಮರಾಗಿದ್ದಾರೆ.
ಕಾಶೀರಾಯ್ ಅವರು ಬಸವಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ನಿವಾಸಿ. ಸೇನಾಧಿಕಾರಿಗಳು ಕಾಶೀರಾಯ್ ಹುತಾತ್ಮರಾಗಿರುವ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ನಾಳೆ ಹುತಾತ್ಮ ಯೋಧ ಕಾಶೀರಾಯ್ ಪಾರ್ಥಿವ ಶರೀರ ತಲುಪುವ ನಿರೀಕ್ಷೆಗಳಿವೆ. ವಿಷಯ ತಿಳಿಯುತ್ತಲೇ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
Advertisement
Advertisement
ತಂದೆ, ತಾಯಿ, ಪತ್ನಿ, ಓರ್ವ ಗಂಡು ಮಗು, ಓರ್ವ ಹೆಣ್ಣು ಮಗು ಹಾಗೂ ಇಬ್ಬರು ಸಹೋದರರನ್ನ ಕಾಶೀರಾಯ್ ಅಗಲಿದ್ದಾರೆ. ಗ್ರಾಮದಲ್ಲಿಯೇ ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆಯಲಿರುವ ಹುತಾತ್ಮ ಯೋಧನ ಅಂತ್ಯಕ್ರಿಯೆ ನಡೆಯಲಿದೆ.