ನವದೆಹಲಿ: ಪುಲ್ವಾಮಾ ದಾಳಿಯನ್ನು ನಾವೇ ಮಾಡಿದ್ದು ಎಂದು ಪಾಕಿಸ್ತಾನ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.
Advertisement
ಪುಲ್ವಾಮಾ ಉಗ್ರರ ದಾಳಿ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡ ಇದೆ ಎಂದು ಕಾಂಗ್ರೆಸ್ ನಾಯಕರು ಈ ಹಿಂದೆ ಆರೋಪಿಸಿದ್ದರು. ಆದರೆ ಸದ್ಯ ಪುಲ್ವಾಮಾ ದಾಳಿ ಇಮ್ರಾನ್ ಖಾನ್ ಸರ್ಕಾರ ಸಾಧನೆ ಎಂಬಂತೆ ಪಾಕ್ ಮಂತ್ರಿಯೇ ಹೇಳಿರುವುದರಿಂದ ಕಾಂಗ್ರೆಸ್ ನಾಯಕರು ಕ್ಷಮೆ ಕೇಳ ಬೇಕು ಎಂದು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
Advertisement
Pakistan has admitted its hand behind Pulwama terror attack. Now, Congress and others who talked of conspiracy theories must apologise to the country.
— Prakash Javadekar (@PrakashJavdekar) October 30, 2020
Advertisement
ಪುಲ್ವಾಮಾ ದಾಳಿಯ ಹಿಂದೆ ಪ್ರಧಾನಿ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ದೇಶದ ಸಿಆರ್ ಪಿಎಫ್ ಸೈನಿಕರ ಮೇಲಿನ ದಾಳಿಯಿಂದ ಬಿಜೆಪಿ ಲಾಭ ಪಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಕೇವಲ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರವಲ್ಲದೇ ವಿರೋಧ ಪಕ್ಷಗಳ ಸ್ಥಾನದಲ್ಲಿದ್ದ ಹಲವು ನಾಯಕರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆರೋಪಿಸಿದ್ದರು.
Advertisement
ಪಾಕ್ ಸಂಸತ್ತಿನಲ್ಲಿ ಮಾತನಾಡಿದ್ದ ಸಚಿವ ಫವಾದ್ ಚೌಧರಿ, ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ. ಪುಲ್ವಾಮಾ ದಾಳಿಯ ಯೋಜನೆ ಪಾಕಿಸ್ತಾನದಲ್ಲೇ ಸಿದ್ಧವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿಯ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಬೇಕು ಎಂದು ಹೇಳುವ ಮೂಲಕ ಪುಲ್ವಾಮಾ ದಾಳಿಯ ಹಿಂದಿನ ಸತ್ಯವನ್ನು ಒಪ್ಪಿಕೊಂಡಿದ್ದರು.
#WATCH: Pakistan’s Federal Minister Fawad Choudhry, in the National Assembly, says Pulwama was a great achievement under Imran Khan’s leadership. pic.twitter.com/qnJNnWvmqP
— ANI (@ANI) October 29, 2020