ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರ ಗುಮ್ಮಟಗಳಿಗೆ ಜಗತ್ ಪ್ರಸಿದ್ಧಿ ಪಡೆದಿದೆ. ವಿಜಯಪುರದ ಗೋಲ್ಗುಂಬಜ್ ಅಂತೂ ಜಗತ್ ವಿಖ್ಯಾತಿ ಪಡೆದಿದ್ದು, ಹೊರ ದೇಶದಿಂದ ಕೂಡ ಪ್ರವಾಸಿಗರು ಬರುತ್ತಿರುತ್ತಾರೆ. ಕೋವಿಡ್ 19 ಹಿನ್ನೆಲೆ ಪ್ರವಾಸಿಗರು ಬರುತ್ತಿರಲ್ಲಿ. ಆದರೆ ಇದೀಗ ಪುರಾತತ್ವ ಇಲಾಖೆಯ ಎಡವಟ್ಟಿನಿಂದ ಪ್ರವಾಸಿಗರಲ್ಲಿ ಮತ್ತಷ್ಟು ಇಳಿಮುಖವಾಗಿದೆ.
Advertisement
ವಿಜಯಪುರವನ್ನು ಗುಮ್ಮಟಗಳ ನಗರಿ ಅಂತಲೇ ಪ್ರಸಿದ್ಧಿ. ವಿಜಯಪುರ ನಗರದ ಗೋಲ್ಗುಂಬಜ್, ಬಾರಾಕಮಾನ, ಇಬ್ರಾಹಿಂ ರೋಜಾ ಪ್ರಮುಖ ಪ್ರೇಕ್ಷಣೀಯ ಸ್ಥಗಳಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೊರ ದೇಶ, ಹೊರ ರಾಜ್ಯ ಸೇರಿದಂತೆ ಎಲ್ಲೆಡೆಯಿಂದ ಪ್ರವಾಸಿಗರು ಗುಮ್ಮಟಗಳ ನಗರಿ ವಿಜಯಪುರಕ್ಕೆ ಪ್ರತಿನಿತ್ಯ ಬರುತ್ತಾರೆ. ಆದರೆ ಕೋವಿಡ್ 19 ಲಾಕ್ ಡೌನ್ ಮುಗಿದ ನಂತರ ಹೇಳಿಕೊಳ್ಳುವಷ್ಟು ಪ್ರವಾಸಿಗರು ವಿಜಯಪುರಕ್ಕೆ ಭೇಟಿ ನೀಡಿರಲಿಲ್ಲ. ಕಳೆದ ತಿಂಗಳಿನಿಂದ ಪ್ರವಾಸಿಗರು ಮತ್ತೆ ಗುಮ್ಮಟ ನಗರಿಯತ್ತ ಮುಖ ಮಾಡಿದ್ದಾರೆ. ಪುರಾತತ್ವ ಇಲಾಕೆಯ ಎಡವಟ್ಟಿನಿಂದ ದೂರ ದೂರದ ಊರಿನಿಂದ ಬಂದ ಪ್ರವಾಸಿಗರು ಪ್ರವಾಸಿ ತಾಣಗಳನ್ನು ವೀಕ್ಷಿಸಿದೆ ಮರಳುತ್ತಿದ್ದಾರೆ.
Advertisement
Advertisement
ಲಾಕ್ ಡೌನ್ ಮುಗಿದ ನಂತರ ಪ್ರವಾಸಿ ತಾಣಗಳ ಹೊರಗಡೆನೇ ಪ್ರವೇಶದ ಟಿಕೆಟ್ ನಿಡಲಾಗುತ್ತಿತ್ತು. ಇದೀಗ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲಾಗಿದ್ದು, ಬುಕ್ ಮಾಡದೆ ಬಂದವರು ವೀಕ್ಷಣೆ ಪ್ರವೇಶಕ್ಕೆ ಅವಕಾಶ ಸಿಗದೆ ನಿರಾಸೆಯಿಂದ ಮರಳುವಂತಾಗಿದೆ. ಬಹುತೇಕರಿಗೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇರುವುದು ಮಾಹಿತಿ ಇಲ್ಲ. ಇದರ ಬಗ್ಗೆ ಪುರಾತತ್ವ ಇಲಾಖೆ ಸರಿಯಾಗಿ ಪ್ರಚಾರ ಕೂಡ ಮಾಡಿಲ್ಲ. ಕಾರಣ ಪ್ರವೇಶ ದ್ವಾರದಲ್ಲಿ ಟಿಕೆಟ್ ಸಿಗುತ್ತೆ ಅಂತ ಬರುತ್ತಿರುವ ಪ್ರವಾಸಿಗರು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ಮರಳುತ್ತಿದ್ದಾರೆ.
Advertisement
ಒಂದು ಕಡೆ ಕೋವಿಡ್ 19 ರಿಂದ ಜಿಲ್ಲೆಯ ಪ್ರವಾಸೋದ್ಯಮ ನೆಲಕ್ಕಚ್ಚಿದೆ. ಇನ್ನೊಂದೆಡೆ ಈ ರೀತಿ ಆನ್ ಲೈನ್ ಬುಕಿಂಗ್ ಪ್ರಾರಂಭಿಸಿ ಇನ್ನಷ್ಟು ಪ್ರವಾಸೋದ್ಯಮ ಹಳ್ಳ ಹಿಡಿಯುವಂತೆ ಇಲಾಖೆ ಮಾಡಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಪ್ರವೇಶ ದ್ವಾರಗಳಲ್ಲೇ ಆನ್ಲೈನ್ ಟಿಕೆಟ್ ನೀಡುವ ವ್ಯವಸ್ಥೆ ಮಾಡಿದರೆ ಸೂಕ್ತ ಅಂತ ಪ್ರವಾಸಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.