ಮುಂಬೈ: ಸದಾ ಡಿಫರೆಂಟ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಬಾಲಿವುಡ್ ನಟ ಫರ್ಹಾನ್ ಅಖ್ತರ್, ತೂಫಾನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಧಡೂತಿ ದೇಹ ಹೊಂದಿದ್ದ ಫರ್ಹಾನ್ ಅಖ್ತರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಬಾಲಿವುಡ್ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿಸಲು ಫರ್ಹಾನ್ ಅಖ್ತರ್, ತೂಫನ್ ಚಿತ್ರಕ್ಕಾಗಿ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಫರ್ಹಾನ್ ಅಖ್ತರ್ ಬಾಕ್ಸರ್ ಅಜೀಜ್ ಅಲಿ ಖಾನ್ ಆಗಿ ಕಾಣಿಸಿಕೊಂಡಿದ್ದು, ಬಾಕ್ಸರ್ ಆಗುವುದಕ್ಕೂ ಮುನ್ನ ಪುಡಿ ರೌಡಿಯಾಗಿದ್ದವರು, ನಂತರ ಬಾಕ್ಸಿಂಗ್ ಕಲಿಯುತ್ತಾರೆ. ಈ ಮಧ್ಯೆ ಬಾಕ್ಸಿಂಗ್ ತೊರೆಯುವ ಸಂದರ್ಭ ಬರುತ್ತದೆ. ಆಗ ಬಾಕ್ಸಿಂಗ್ ಬಿಟ್ಟಾಗ ಅಜೀಜ್ ದಪ್ಪ ಆಗುತ್ತಾರೆ.
Advertisement
Advertisement
ತೂಫಾನ್ ಚಿತ್ರದಲ್ಲಿ ಬರುವ ಇದೊಂದು ಸಣ್ಣ ಪಾತ್ರಕ್ಕೆ ಫರ್ಹಾನ್ 69.9 ಕೆಜಿ ದೇಹ ತೂಕವನ್ನು 85 ಕೆ.ಜಿಗೆ ಏರಿಸಿಕೊಂಡಿದ್ದಾರೆ. ಬಳಿಕ ತೂಕ ಇಳಿಸಿಕೊಂಡು ಮತ್ತೆ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.
Advertisement
ಸದ್ಯ ಸಿಕ್ಸ್ ಪ್ಯಾಕ್ ಜೊತೆಗೆ ತೂಕ ಏರಿಸಿಕೊಂಡಿರುವ ಫೋಟೋವನ್ನು ಫರ್ಹಾನ್ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಜೀಜ್ ಅಲಿಯವರ ಪಾತ್ರಕ್ಕಾಗಿ ತೂಫಾನ್ ಚಿತ್ರದಲ್ಲಿ ಹಲವು ಆಕಾರ ಮತ್ತು ಶೇಪ್ಗಳು. 18 ತಿಂಗಳ ಶ್ರಮ, ಪ್ರತಿ ಬೆವರಿನ ಹನಿ, ನೋಯುತ್ತಿರುವ ಸ್ನಾಯುಗಳು ಮತ್ತು ತೂಕ ಏರಿಸಿಕೊಂಡಿದ್ದು, ಇಳಿಸಿಕೊಂಡಿರುವುದು ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ತೂಫಾನ್ ಚಿತ್ರಕ್ಕೆ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಆ್ಯಕ್ಷನ್ ಕಟ್ ಹೇಳಿದ್ದು, ಜುಲೈ 16ರಂದು ಈ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿತ್ತು. 2013 ರಲ್ಲಿ ಭಾಗ್ ಮಿಲ್ಖಾ ಭಾಗ್ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿಕೊಟ್ಟ ಫರ್ಹಾನ್ ಅಖ್ತರ್ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡಿದ್ದರು. ಇದನ್ನೂ ಓದಿ:1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್
View this post on Instagram