– ಪಾಕಿಸ್ತಾನ ಮತ್ತು ನಮ್ಮ ಜೀನ್ಸ್ ಒಂದೇ
ಧಾರವಾಡ: ಕೇಂದ್ರ ಸರ್ಕಾರದವನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನ ಹಾಗೂ ಭಾರತೀಯರ ಜೀನ್ಸ್ ಒಂದೇ ಎಂದು ಕಾಂಗ್ರೆಸ್ ಮುಖಂಡ ಅನಿಲ ಕುಮಾರ ಪಾಟೀಲ ಹೇಳಿದ ವಿಡಿಯೋ ಒಂದು ವೈರಲ್ ಆಗಿದೆ.
ಎರಡು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಆಯೋಜಿಸಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅನಿಲ ಕುಮಾರ ಪಾಟೀಲ, ಪಾಕಿಸ್ತಾನ, ಭಾರತ ಹಾಗೂ ಬಾಂಗ್ಲಾದೇಶದವರ ಜೀನ್ಸ್ ಒಂದೇ. ಪಾಕಿಸ್ತಾನದಲ್ಲಿ ಒಂದು ದಿನಕ್ಕೆ 300 ರಿಂದ 400 ಕೊರೊನಾ ಸೋಂಕಿತರು ಸಿಕ್ಕರೆ, ಭಾರತದಲ್ಲಿ 6 ಸಾವಿರ ಜನರಿಗೆ ಸೋಕು ತಗುಲುತ್ತಿದೆ ಎಂದು ಹೇಳಿದ್ದಾರೆ.
Advertisement
ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿದೆ. ಲಾಕ್ಡೌನ್ ವಿಫಲವಾಗಿದ್ದು, ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಕೊರೊನಾ ಎಲ್ಲಿವರೆಗೂ ತಲುಪಬೇಕೋ ಅಲ್ಲಿವರೆಗೂ ತಲುಪುತ್ತದೆ ಎಂದಿರುವ ಕಾಂಗ್ರೆಸ್ ಮುಖಂಡ ಅನಿಲ ಕುಮಾರ, ಪಾಕಿಸ್ತಾನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.