– ಪಾಕ್ ಪೇಜ್ ಶೇರ್ ಮಾಡಿದ್ದ ಪೇದೆ
ದಾವಣಗೆರೆ: ಪಾಕಿಸ್ತಾನದ ಪೇಜ್ ಹಂಚಿಕೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ವಹಿಸಲಾಗಿತ್ತು. ಆದರೆ ಹತ್ತು ದಿನವಾದರೂ ಪೊಲೀಸರು ಪೇದೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
Advertisement
ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಪೇದೆ ಪಾಕಿಸ್ತಾನದ ಪೇಜ್ ಶೇರ್ ಮಾಡಿದ್ದರು. 2008ರ ಪೊಲೀಸ್ ಬ್ಯಾಚ್ ವಾಟ್ಸಪ್ ಗ್ರೂಪ್ ನಲ್ಲಿ ಸನಾವುಲ್ಲಾ ಶೇರ್ ಮಾಡಿದ್ದರು. ದೇಶದ್ರೋಹದ ಕೇಸ್ ಹಾಕಿ ಸೇವೆಯಿಂದ ಅಮಾನತು ಮಾಡಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದರು. ಪೊಲೀಸರು ಹತ್ತು ದಿನವಾದರೂ ಕಾನ್ಸ್ಟೇಬಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈ ವೆರೆಗ ಅವರು ಪತ್ತೆಯಾಗಿಲ್ಲ.
Advertisement
Advertisement
ಆಗಸ್ಟ್ 20ರಂದು ಪ್ರಕರಣ ಬಯಲಿಗೆ ಬಂದಿತ್ತು. ಇಷ್ಟು ದಿನವಾದರೂ ಕಾನ್ಸ್ಟೇಬಲ್ ಸನಾವುಲ್ಲಾ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣ ಬಯಲಿಗೆ ಬಂದ ನಂತರ ಸನಾವುಲ್ಲಾ ತಲೆಮರೆಸಿಕೊಂಡಿದ್ದಾರೆ. ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲು ಎಸ್ಪಿ ಹನುಮಂತರಾಯ ಅದೇಶಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.