– ನಾಳೆ ವಿದ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿರತಣೆ
ಚಾಮರಾಜನಗರ: ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.
Advertisement
ಇದೇ ವೇಳೆ ಚಾಮರಾಜನಗರದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಚೆನ್ನಾಗಿ ಬರೆಯುವಂತೆ ಶಾಸಕರು ಸಲಹೆ ನೀಡಿದ್ದಾರೆ. ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.
Advertisement
Advertisement
ಚಾಮರಾಜನಗರ ಕ್ಷೇತ್ರದ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಗ್ಲೌಸ್ ನೀಡಿದ್ದಾರೆ. ನಾಳೆಯಿಂದ ವಿಧ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿತರಿಸುತ್ತೇನೆಂದು ಭರಸವೆ ಕೂಡ ನೀಡಿದ್ದಾರೆ.
Advertisement
ಕೊರೊನಾ ಮಹಾಮಾರಿಯ ನರ್ತನದ ನಡುವೆಯೇ ರಾಜ್ಯದಲ್ಲಿ ಇಂದಿನಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ಕೊರೊನಾದಿಂದ ಮೂರು ತಿಂಗಳಿನಿಂದ ಮುಂದೂಡಿಕೆಯಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂದಿನಿಂದ ಜುಲೈ 4ರವರೆಗೆ ನಡೆಯಲಿದೆ.