ಮೈಸೂರು: ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸರ್ಕಾರ ಅಂದ ಮೇಲೆ ಜೀವ ಹಾಗೂ ಜೀವನ ಎರಡನ್ನು ಉಳಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಲಾಕ್ಡೌನ್ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದರು. ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಕೂರಿಸುತ್ತೀರಾ ಎಂದು ಪ್ರಶ್ನಿಸಿದ ಸಂಸದರು, ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು ಎಂದರು.
Advertisement
Advertisement
ಮತ್ತೆ ಲಾಕ್ಡೌನ್ ಅವಶ್ಯಕತೆ ಇಲ್ಲ ಅಂತಿಮ ನನಗೆ ಅನ್ನಿಸುತ್ತದೆ. ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸರ್ಕಾರ ಅಂದ ಮೇಲೆ ಜೀವ ಜೀವನ ಎರಡನ್ನು ಉಳಿಸಬೇಕು. ತಜ್ಞರು ಭಾರತದಲ್ಲಿ ಲಕ್ಷಗಟ್ಟಲೆ ಜನ ಸಾಯ್ತಾರೆ ಅಂದಿದ್ದರು. ಹಾಗೇನಾದ್ರು ಆಯ್ತಾ.?, ಈಗಲೂ ಅಷ್ಟೇ ಏನೂ ಆಗೋಲ್ಲ ಅಂತ ತಿಳಿಸಿದರು.
Advertisement
Advertisement
ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಸರ್ಕಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡುವಾಗ ಇದನ್ನೆಲ್ಲ ಯೋಚನೆ ಮಾಡಿದೆ. ಮುಂಬೈ, ದೆಹಲಿ, ಬೆಂಗಳೂರಿಗೂ ವ್ಯತ್ಯಾಸ ಇದೆ. ಅಲ್ಲಿನ ಪರಿಸ್ಥಿತಿಗೂ ಇಲ್ಲಿಗು ಸಾಕಷ್ಟು ವ್ಯತ್ಯಾಸ ಇದೆ. ಬೆಂಗಳೂರಿನಲ್ಲಿ ಕಡಿಮೆ ಆಕ್ಟಿವ್ ಕೇಸ್ ಇದೆ. ಹಾಗಾಗಿ ಮತ್ತೆ ಲಾಕ್ಡೌನ್ ಎನ್ನುವ ಅನಿವಾರ್ಯತೆ ಇಲ್ಲ ಎಂದರು.