ಬೀಜಿಂಗ್: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ.
ಚೀನಾದ ದೈತ್ಯ ಇಂಟರ್ನೆಟ್ ಕಂಪನಿ ಟೆನ್ಸೆಂಟ್ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್ ಕರಗಿ ಹೋಗಿದೆ.
Advertisement
Advertisement
ಪಬ್ಜಿ ಆಟಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ ಮತ್ತು ಜನರ ಖಾಸಗಿತನವನ್ನು ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರ ಬುಧವಾರ ಪಬ್ಜಿ ಸೇರಿದಂತೆ 117 ಚೀನಿ ಅಪ್ಲಿಕೇಶನ್ಗಳನ್ನು ನಿಷೇಧ ಮಾಡಿದೆ.
Advertisement
ಪಬ್ಜಿ ಆಟವನ್ನು ದಕ್ಷಿಣ ಕೊರಿಯಾದ ಕಂಪನಿ ಅಭಿವೃದ್ಧಿ ಪಡಿಸಿದ್ದರೂ ಇದರ ಮೊಬೈಲ್ ಆವೃತ್ತಿಯನ್ನು ಟೆನ್ಸೆಂಟ್ ಹೋಲ್ಡಿಂಗ್ಸ್ ಖರೀದಿಸಿದೆ.
Advertisement
ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು. ಗಲ್ವಾನ್ ಘರ್ಷಣೆಯ ಬಳಿಕ ಟಿಕ್ಟಾಕ್ ಸೇರಿದಂತೆ 59 ಅಪ್ಲಿಕೇಶನ್ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು.
ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಪ್ರಜೆಗಳ ಖಾಸಗಿತನವನ್ನು ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಒಟ್ಟು 250 ಚೀನಿ ಅಪ್ಲಿಕೇಶನ್ಗಳ ಮೇಲೆ ನಿಗಾ ಇಟ್ಟಿದೆ.