– ಕ್ಯಾಮೆರಾ ತೆಗೆಸುವಂತೆ ಕೋರ್ಟ್ ಮೊರೆ ಹೋದ ಮಹಿಳೆ
ಗಾಂಧಿನಗರ: ಪತ್ನಿ ಮೇಲೆ ಅನುಮಾನಗೊಂಡ ವಾಯು ಪಡೆಯ ನಿವೃತ್ತ ಅಧಿಕಾರಿಯೊಬ್ಬರು ತನ್ನ ಪತ್ನಿ ಮೇಲೆ ಕಣ್ಣಿಡಲು ಬೆಡ್ ರೂಂನಲ್ಲಿಯೇ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, ಇದನ್ನರಿತ ಪತ್ನಿ ಸಿಸಿ ಕ್ಯಾಮೆರಾ ತೆಗೆಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದ ಕುರಿತು ಕೋರ್ಟ್ ವಿಚಾರಣೆ ನಡೆಸಿದ್ದು, ನಿರ್ವಹಣಾ ವೆಚ್ಚವಾಗಿ ಪತ್ನಿಗೆ ಪ್ರತಿ ತಿಂಗಳು 40 ಸಾವಿರ ರೂ. ನೀಡುವಂತೆ ಹಾಗೂ ಬೆಡ್ ರೂಂನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ತೆಗೆಸುವಂತೆ ಸೂಚಿಸಿದೆ. ಕಳೆದ ವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಪಿ.ಎ.ಪಟೇಲ್ ಈ ತೀರ್ಪು ನೀಡಿದ್ದಾರೆ.
Advertisement
Advertisement
ಕ್ಯಾಮೆರಾ ತೆಗೆಯಲು ನ್ಯಾಯಾಲಯ ಮಹಿಳೆಗೆ ಅನುಮತಿ ನೀಡಿದೆ. ಮಕ್ಕಳಿಗೆ ಸ್ಪೋಟ್ರ್ಸ್ ತರಬೇತಿ ಕೊಡಿಸುವ ಸಂಬಂಧ ಮಹಿಳೆ ಮುಂಬೈಗೆ ತೆರಳಿದ್ದರು. ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ ಅಂತ್ಯದಲ್ಲಿ ಮಹಿಳೆ ಮುಂಬೈನಿಂದ ಪತಿಯ ಮನೆಗೆ ಆಗಮಿಸಿದ್ದರು. ಪತ್ನಿ ಮನೆಗೆ ಬರುತ್ತಿದ್ದಂತೆ ವ್ಯಕ್ತಿ ಬೆಡ್ರೂಂನಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಿಸಿದ್ದ.
Advertisement
ಮೇ 20ರಂದು ವಾಯು ಪಡೆಯ ನಿವೃತ್ತ ಅಧಿಕಾರಿ ತಮ್ಮ ಮನೆಯ ಬೆಡ್ರೂಂ ಸೇರಿ ಮನೆಯ ವಿವಿಧ ಭಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದ. ಇದರಿಂದಾಗಿ ಪತ್ನಿ ಹಾಗೂ ಮಗಳಿಗೆ ಇರುಸುಮುರುಸು ಉಂಟಾಗಿದೆ. ಈ ವ್ಯರ್ಥ ಕ್ಯಾಮೆರಾಗಳನ್ನು ತೆಗೆಯಿರಿ ಎಂದು ಬೇಡಿಕೆ ಇಟ್ಟಿದ್ದರೂ ತೆಗೆದಿಲಿಲ್ಲ.
Advertisement
ಪತ್ನಿ ಮುಂಬೈನಿಂದ ಹಿಂದಿರುಗುತ್ತಿದ್ದಂತೆ ಪತಿ ಅವರನ್ನು ನಿಂದಿಸಿ, ಮೊಬೈಲ್ ಮುರಿದು ಹಾಕಿದ್ದಾನೆ. ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿ ಪತ್ನಿಯ ಆಧಾರ್ ಕಾರ್ಡ್, ಪಾಸ್ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಬಚ್ಚಿಟ್ಟಿದ್ದಾನೆ. ಮಹಿಳೆ ಮತ್ತೊಮ್ಮೆ ಪೊಲೀಸರ ಬಳಿ ಹೋಗಿದ್ದು, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಏಪ್ರಿಲ್, ಜೂನ್ ವೇಳೆ ಮಹಿಳೆ ಮೇಲೆ ಪತಿ ಹಲ್ಲೆ ಮಾಡಿದ್ದು, ಯಾವುದೇ ಪುರಾವೆ, ಸಾಕ್ಷ್ಯ ಸಿಗಬಾರದು ಎಂಬ ಉದ್ದೇಶದಿಂದ ಹಲ್ಲೆ ಮಾಡುವ ವೇಳೆ ಸಿಸಿ ಟಿವಿ ಕ್ಯಾಮೆರಾಗಳನ್ನು ಬಂದ್ ಮಾಡುತ್ತಿದ್ದ. ಮದ್ಯ ಸೇವಿಸಿ ಬೇಕಾಬಿಟ್ಟಿ ಹಲ್ಲೆ ಮಾಡುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಹಲ್ಲೆಯನ್ನು ಸಹಿಸಿಕೊಳ್ಳದ ಮಹಿಳೆ, ವಕೀಲರಾದ ಜೈದೀಪ್ ವರ್ಮಾ ಹಾಗೂ ಚಂದ್ರಕಾಂತ್ ದವಾನಿ ಅವರನ್ನು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ನ್ಯಾಯಾಲಯದ ಮೊರೆ ಹೋಗಿದ್ದು, ಪತ್ನಿ ಹಾಗೂ ಮಕ್ಕಳಿಗೆ ತೊಂದರೆ ಕೊಡದಂತೆ ಕೋರ್ಟ್ ಹೇಳಿದೆ. ಅಲ್ಲದೆ ಮಹಿಳೆ ಹಾಗೂ ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 40 ಸಾವಿರ ರೂ.ಗಳನ್ನು ನೀಡುವಂತೆ ನಿರ್ದೇಶಿಸಿದೆ.