– ಪತ್ನಿ, ಪ್ರಿಯಕರ ಹತ್ಯೆಗೈದು ಕಥೆ ಕಟ್ಟಿದ್ರು
ಜೈಪುರ: ಪತ್ನಿಯೇ ಪತಿಯನ್ನು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ಅಚ್ಚರಿಯ ಘಟನೆಯೊಂದು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ದೀನಘರ್ ಪ್ರದೇಶದಲ್ಲಿ ನಡೆದಿದೆ.
ಪಪ್ಪು ದೇವಿ(30) ತನ್ನ ಪತಿ 35 ವರ್ಷದ ಮನರಾಮ್ ನನ್ನು ಕೊಲೆಗೈದ ಬಳಿಕ ಸಾವಿನ ಕಥೆ ಕಟ್ಟಿದ್ದಾಳೆ.
Advertisement
Advertisement
ಪತಿ ಮನರಾಮ್ ಗೆ ತನ್ನ ಪತ್ನಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದೇ ಈ ಘಟನೆ ಕಾರಣ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತನ ಸಹೋದರ, ಅತ್ತಿಗೆ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
ಜೂನ್ 15ರಂದು ಮನರಾಮ್ ಮನೆಯಲ್ಲಿ ಮಲಗಿದ್ದನು. ಸ್ವಲ್ಪ ಹೊತ್ತಿನ ನಂತರ ಪಪ್ಪು ದೇವಿ ನನಗೆ ಕರೆ ಮಾಡಿ ಮನರಾಮ್ ಮಾತನಾಡುತ್ತಿಲ್ಲ. ಕೂಡಲೇ ಮನೆಗೆ ಬನ್ನಿ ಎಂದು ಹೇಳಿದ್ದಾಳೆ. ಹೀಗಾಗಿ ನಾವು ಎಲ್ಲರೂ ಅಣ್ಣನ ಮನೆಗೆ ಓಡಿದೆವು. ಮನೆಗೆ ಹೋಗಿ ನೋಡಿದಾಗ ಸಹೋದರನ ಕಾಲಿನಲ್ಲಿ ರಕ್ತ ಹರಿಯುತ್ತಿತ್ತು ಎಂದು ಸಹೋದರ ತೋಗರಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
Advertisement
ಈ ವೇಳೆ ಪಪ್ಪು ದೇವಿ ಮನರಾಮ್ ಮನೆಯವರ ಬಳಿ, ಆತನಿಗೆ ವಿದ್ಯುತ್ ಶಾಕ್ ಹೊಡೆದಿದೆ. ಹೀಗಾಗಿ ಆತನ ಕಾಲಿನಲ್ಲಿ ರಕ್ತ ಬರುತ್ತಿದೆ ಎಂದು ಕಥೆ ಕಟ್ಟಿದ್ದಾಳೆ. ಕೂಡಲೇ ಮೃತನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇತ್ತ ಮನರಾನ್ ಮೃತಪಟ್ಟ 12 ದಿನಗಳ ಬಳಿಕ ಮತ್ತೆ ಪಪ್ಪು ದೇವಿಯನ್ನು ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ ಆಕೆ ಇದೇ ವೇಳೆ ತನಗೆ ಹನುಮನ್ರಾಮ್ ಎಂಬಾತನ ಜೊತೆ ಅಕ್ರಮ ಸಂಬಂಧ ಬಗ್ಗೆಯೂ ಮನರಾಮ್ ಕುಟುಂಬಸ್ಥರ ಮುಂದೆ ಬಾಯ್ಬಿಟ್ಟಿದ್ದಾಳೆ.
ಅಕ್ರಮ ಸಂಬಂಧ ಇರುವ ಹಿನ್ನೆಲೆಯಲ್ಲಿ ಆಕೆ ತನ್ನ ಪ್ರಿಯಕರನ ಜೊತೆ ಪತಿಯನ್ನು ಕೊಲ್ಲಲು ನಿರ್ಧರಿಸಿದ್ದಾಳೆ. ಅಲ್ಲದೆ ಅದಕ್ಕಾಗಿ ಪ್ರಿಯಕರನ ಸಹಾಯ ಕೂಡ ಕಾಡಿ ಬೇಡಿ ಪಡೆದುಕೊಂಡಿದ್ದಾಳೆ. ಆತ ಕೊಲೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿ ಇಬ್ಬರು ಸೇರಿ, ಮನರಾಮ್ಗೆ ನಿದ್ದೆ ಮಾತ್ರ ಕೊಟ್ಟಿದ್ದಾಳೆ. ಇದನ್ನು ತಿಂದಿರುವ ಮನರಾಮ್ ಗಾಢ ನಿದ್ದೆಗೆ ಜಾರಿದ್ದಾನೆ. ಇದೇ ಸಂದರ್ಭದಲ್ಲಿ ಆತನ ಕಾಲಿನ ಬೆರಳುಗಳಿಗೆ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ. ಕೊಲೆಯ ಬಗ್ಗೆ ಪಪ್ಪು ದೇವಿಯ ಪ್ರಿಯಕರ ಹನುಮನರಾಮ್ ಕೂಡ ಒಪ್ಪಿಕೊಂಡಿದ್ದಾನೆ.