ನವದೆಹಲಿ: ಹಲವು ಪ್ರಕರಣಗಳಲ್ಲಿ ಪತಿಯೇ ಪತ್ನಿಗೆ ಜೀವನಾಂಶ ನೀಡಿ ವಿಚ್ಛೇದನ ಪಡೆಯುವುದನ್ನು ನೋಡಿರುತ್ತೇವೆ. ಆದರೆ ಹಾಲಿವುಡ್ ಖ್ಯಾತ ಗಾಯಕಿ ಅಡೆಲೆ ವಿಚ್ಛೇದನ ಪಡೆಯಲು ತಮ್ಮ ಪತಿಗೆ ಬರೋಬ್ಬರಿ 1,248 ಕೋಟಿ ರೂ.ಗಳ ಪರಿಹಾರವನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
Advertisement
ಹೌದು ಶುಕ್ರವಾರ ಅವರ ವಿಚ್ಛೇದನ ಪ್ರಕರಣ ಬಗೆಹರಿದಿದ್ದು, ಪತಿ ಸೈಮನ್ ಕೊನೆಕಿ ಅವರಿಗೆ 171 ಮಿಲಿಯನ್ ಡಾಲರ್ ಪರಿಹಾರ ನೀಡಿ ವಿಚ್ಛೇದನ ಪಡೆದಿದ್ದಾರೆ. ಸೈಮನ್ ಸಹ ಉದ್ಯಮಿಯಾಗಿದ್ದು, ಅಡೆಲೆ ಡ್ರಾಪ್ ಫೋರ್ ಡ್ರಾಪ್ ಚಾರಿಟಿಯ ಸಿಇಒ ಆಗಿದ್ದಾರೆ. ಅಡೆಲೆ ಜೊತೆ ಆಗಮಿಸಿದ್ದ ಸೈಮನ್ ಗುರುವಾರ ಸೆಟಲ್ಮೆಂಟ್ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅಂತಿಮವಾಗಿದ್ದು, 171 ಮಿಲಿಯನ್ ಡಾಲರ್ ನೀಡಲು ಒಪ್ಪಿದ್ದಾರೆ.
Advertisement
Advertisement
ಹಣಕಾಸಿನ ಹಾಗೂ ಇತರ ಗೌಪ್ಯ ವ್ಯವಹಾರದ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ. ವಿಚ್ಛೇದನ ಪಡೆಯಲು ಅಡೆಲೆಯವರು ತಮ್ಮ ಮಾಜಿ ಪತಿಗೆ ದೊಡ್ಡ ಮೊತ್ತ ಪಾವತಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ವಿಚ್ಛೇದನ ಫೈನಲ್ ಮಾಡಲು ದಂಪತಿ ದಾಖಲೆಗಳನ್ನು ಸಲ್ಲಿಸಿದರೂ, ನ್ಯಾಯಾಧೀಶರ ಅನುಮೋದನೆ ಇಲ್ಲದೆ ವಿವಾಹ ಅಧಿಕೃತವಾಗಿ ಕೊನೆಗೊಳ್ಳುವುದಿಲ್ಲ. ಹೀಗಾಗಿ ತಡವಾಗಿದೆ.
Advertisement
ಪ್ರಾಥಮಿಕ ಒಪ್ಪಂದದ ಪ್ರಕಾರ, ಅಡೆಲೆ ಹಾಗೂ ಸೈಮನ್ ಇಬ್ಬರೂ ತಮ್ಮ ಎಂಟು ವರ್ಷದ ಮಗ ಏಂಜೆಲೊ ಜೊತೆ ಜಂಟಿಯಾಗಿ ಉತ್ತಮ ಬಂಧನ ಮುಂದುವರಿಸಲು ನಿಶ್ಚಯಿಸಿದ್ದಾರೆ. ಅಲ್ಲದೆ ಇಬ್ಬರೂ ಸೇರಿ ತಮ್ಮ ಮಗನನ್ನು ಪ್ರೀತಿಯಿಂದ ಬೆಳೆಸಲು ಬದ್ಧವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರತಿಷ್ಠಿತ ಗ್ರ್ಯಾಮಿ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಗಾಯಕಿ ಅಡೆಲೆ ಅವರು 2011ರಿಂದ ಸೈಮನ್ ಜೊತೆ ಡೇಟಿಂಗ್ನಲ್ಲಿದ್ದರು. ಬಳಿಕ ಅಕ್ಟೋಬರ್ 2012ರಲ್ಲಿ ಮಗ ಏಂಜೆಲೊಗೆ ಜನ್ಮ ನೀಡಿದರು. 2016ರಲ್ಲಿ ಲೋ-ಕೀ ಸಮಾರಂಭದಲ್ಲಿ ದಂಪತಿ ವಿವಾಹವಾಗಿದ್ದರು. 2019ರ ಏಪ್ರಿಲ್ನಲ್ಲಿ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಬಳಿಕ ಇಬ್ಬರೂ ಬೇರಿಯಾಗಿರುವುದು ಬಹಿರಂಗವಾಗಿ 5 ತಿಂಗಳ ಬಳಿಕ ಗಾಯಕಿ ಕೋರ್ಟ್ಗೆ ದಾಖಲೆಗಳನ್ನು ನೀಡಿ ವಿಚ್ಛೇದನ ಪಡೆಯಲು ಮುಂದಾದರು. ಇದೀಗ ಇಬ್ಬರೂ ಸೆಟಲ್ಮೆಂಟ್ ಮಾಡಿಕೊಂಡಿದ್ದು, ಅಡೆಲೆ ಅವರು ತಮ್ಮ ಮಾಜಿ ಪತಿ ಸೈಮನ್ ಅವರಿಗೆ 171 ಕೋಟಿ ರೂ. ಪರಿಹಾರ ನೀಡಿ ವಿಚ್ಛೇದನ ಪಡೆದಿದ್ದಾರೆ.