ಹಾಸನ: ಪಕ್ಷಾತೀತವಾಗಿ ಕನ್ನಡದ ನಾಡುಗಡಿ ಉಳಿಸಲು ನಾನು ಬದ್ಧ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಸವ ಕಲ್ಯಾಣ ಉಪ ಚುನಾವಣೆ ಮುಂದಿಟ್ಟುಕೊಂಡು ಈ ಪ್ರಾಧಿಕಾರ ಮಾಡಿದ್ದಾರೆ. ಹಣವಿಡದೇ ಕೇವಲ ನಾಮಕಾವಸ್ತೆಗೆ ನಿಗಮ ಮಾಡಿದ್ದಾರೆ. ಈ ಹಿಂದೆ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ನಿಗಮ ಮಾಡಿದ್ದರು. ಈವರೆಗೂ ಈ ನಿಗಮಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.
Advertisement
Advertisement
ಇದರ ಜೊತೆಗೆ ಕಾರವಾರ ಬೆಳಗಾವಿ ಸೇರಿ ಕೆಲ ಕರ್ನಾಟಕದ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾ ಸರ್ಕಾರದ ಕ್ಯಾತೆ ತೆಗೆದಿರುವ ವಿಚಾರವಾಗಿ ಮಾತನಾಡಿ, ಕೇಂದ್ರದಲ್ಲಿ ನಮ್ಮ ಸಂಸದರು ಸರಿಯಾಗಿ ಮಾತನಾಡಿ ಉತ್ತರ ಕೊಡಬೇಕು. ಪಕ್ಷಾತೀತವಾಗಿ ಕನ್ನಡದ ನಾಡುಗಡಿ ಉಳಿಸಲು ನಾನು ಬದ್ಧವಾಗಿದ್ದೇನೆ. ನಮ್ಮ ನಾಡು ಭಾಷೆ ವಿಚಾರದಲ್ಲಿ ನಾನು ಯಾವಾಗಲೂ ಹೋರಾಡಲು ಸಿದ್ಧ. ಸರ್ಕಾರದ ಜೊತೆಯಿದ್ದು ನಾನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಜಿಲ್ಲೆಯಲ್ಲಿ ನಡೆದ ದಿಶಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಓಗೆ ಸೂಚನೆ ನೀಡಿದರು.