– ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಮತ್ತೊಮ್ಮೆ ಶಾಕ್
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಮತ್ತೊಮ್ಮೆ ಶಾಕ್ ನೀಡಿದ್ದು, ರಾಜ್ಯಸಭಾ ಉಪಚನಾವಣೆಗೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಸಾಮಾನ್ಯ ಕಾರ್ಯಕರ್ತರಾಗಿರುವ ಡಾ.ಕೆ.ನಾರಾಯಣ್ ಅವರಿಗೆ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಬಿಜೆಪಿ ಮಾಡಿದೆ.
ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವ ಡಾ. ಕೆ. ನಾರಾಯಣ್ (ಸ್ಪ್ಯಾನ್ ಪ್ರಿಂಟ್) ಅವರಿಗೆ ಅಭಿನಂದನೆಗಳು. pic.twitter.com/Zp79L15xVP
— BJP Karnataka (@BJP4Karnataka) November 17, 2020
Advertisement
ಅಶೋಕ್ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಮಾಜಿ ಎಂಎಲ್ ಸಿ ಶಂಕರಪ್ಪ ಮತ್ತು ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದ್ರೆ ಬಿಜೆಪಿ ಮತ್ತೊಮ್ಮೆ ಪಕ್ಷಕ್ಕಾಗಿ ಪರದೆ ಹಿಂದೆ ಕೆಲಸ ಮಾಡಿದ ಕಾರ್ಯಕರ್ತರನ್ನ ಗುರುತಿಸಿದೆ.
Advertisement
ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ ನಾರಾಯಣ್ ಅವರಿಗೆ ಅಭಿನಂದನೆಗಳು. pic.twitter.com/G319rHUVx4
— Nalinkumar Kateel (@nalinkateel) November 17, 2020
Advertisement
ದೇವಾಂಗ ಸಮಯದಾಯದವರಾದ ಡಾ.ಕೆ.ನಾರಾಯಣ್ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಾರಾಯಣ್ ದೇವಾಂಗ ಸಂಘದ ಖಜಾಂಚಿ ಸಹ ಆಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿರುವ ನಾರಾಯಣ್, ಪಕ್ಷಕ್ಕೆ ಸಂಬಂಧಿಸಿದ ಕರಪತ್ರ, ಪ್ರಚಾರ ಸಂಬಂಧ ಮುದ್ರಣಗಳನ್ನು ಮುದ್ರಿಸುತ್ತಿದ್ದರು. 58 ವರ್ಷದಿಂದ ಆರ್ಎಸ್ಎಸ್ ಕಾರ್ಯಕರ್ತರಾಗಿರುವ ನಾರಾಯಣ್, ಸದ್ಯ ನೇಕಾರ ಪ್ರಕೋಷ್ಟದ ಸಹ ಸಂಚಾಲಕರಾಗಿದ್ದಾರೆ.
Advertisement