ಚೆನ್ನೈ: ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯ್ಯಮ್(ಎಂಎನ್ಎಂ) ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ ನೀಡುವುದಾಗಿ ನಟ ಕಮಲ್ ಹಾಸನ್ ಘೊಷಣೆ ಮಾಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 7 ಅಂಶಗಳುಳ್ಳ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ವೇಳೆ 2021ರ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದರೆ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೂ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.
Advertisement
கூடிக் கலையும் கும்பல் அல்ல. கூட்டி வரப்பட்ட கூட்டமும் அல்ல. இது சரித்திரம் படைக்கத் துணிந்தவர்களின் சங்கமம். நாமே தீர்வு எனும் முழக்கம் எம் சங்கநாதம்.
புதியதோர் புதுவை செய்வோம்! pic.twitter.com/6fsUKYTHXh
— Kamal Haasan (@ikamalhaasan) December 23, 2020
Advertisement
ಮನೆಯನ್ನು ನಿಭಾಯಿಸುವ ಗೃಹಿಣಿಯರ ಗೌರವವನ್ನು ಹೆಚ್ಚಿಸಲು ಅವರಿಗೆ ಈ ವೇತನ ನೀಡಲಾಗುವುದು. ಅಲ್ಲದೆ ಮನೆಯ ಎಲ್ಲಾ ಮಂದಿಗೆ ಕಂಪ್ಯೂಟರ್ ಜೊತೆ ಅತಿ ವೇಗದ ಇಂಟರ್ನೆಟ್ ಆಶ್ವಾಸನೆ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.
Advertisement
ಬಡತನ ರೇಖೆಗಿಂತ ಕೆಳಗಿನವರ ಆರ್ಥಿಕ ಉನ್ನತೀಕರಣಕ್ಕೆ ತಮ್ಮ ಪಕ್ಷ ಕ್ರಮ ಕೈಗೊಳ್ಳಲಿದೆ. ಗ್ರಾಮಗಳಲ್ಲಿ ರೈತರಿಗೆ ವಿಶ್ವದರ್ಜೆಯ ಶೀತಲೀಕರಣ ವ್ಯವಸ್ಥೆ, ಸಾವಯವ ಕೃಷಿಗೆ ಒತ್ತು ನೀಡುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.