– ಮೈದಾನದಲ್ಲೇ ಕುಸಿದು ಕೂತ ಎಂಎಸ್ಡಿ
ಅಬುಧಾಬಿ: ಶುಕ್ರವಾರ ನಡೆದ ಹೈದರಾಬಾದ್ ತಂಡ ವಿರುದ್ಧ ಪಂದ್ಯವನ್ನು ಸೋತರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯವರ ಪ್ರಯತ್ನಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೌದು ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಕೊನೆಯವರೆಗೂ ಬ್ಯಾಟ್ ಬೀಸಿ ಪಂದ್ಯವನ್ನು ಕೊನೆಯ ಓವರ್ ತನಕ ತೆಗೆದುಕೊಂಡು ಬಂದಿದ್ದರು. ಆಲೌಟ್ ಆಗುವ ಹಂತದಲ್ಲಿದ್ದ ಚೆನ್ನೈ ತಂಡವನ್ನು ಎಂಎಸ್ ಧೋನಿಯವರು ರವೀಂದ್ರ ಜಡೇಜಾ ಅವರ ಜೊತೆಗೂಡಿ ಕೊನೆಯ ಓವರ್ ತನಕ ತೆಗೆದುಕೊಂಡು ಬಂದಿದ್ದರು. ಆದರೆ ಕೊನೆಯ ಬಾಲ್ವರೆಗೂ ಬ್ಯಾಟ್ ಬೀಸಿದ ಧೋನಿ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.
Advertisement
Advertisement
ಹೈದರಾಬಾದ್ ತಂಡದ ಬೌಲರ್ ಗಳು ಚೆನ್ನೈ ಇನ್ನಿಂಗ್ಸ್ ನ ಆರಂಭದಿಂದಲು ಉತ್ತಮವಾಗಿ ಬೌಲ್ ಮಾಡಿದರು. ಪರಿಣಾಮ ಚೆನ್ನೈ ಟಾಪ್ ಆರ್ಡರ್ ಕುಸಿದು ಹೋಗಿತ್ತು. ಆರಂಭಿಕರಾದ ಫಾಫ್ ಡು ಪ್ಲೆಸಿಸ್, ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಅವರು ತಂಡ 36 ರನ್ ಸೇರಿಸುವಷ್ಟರಲ್ಲಿ ಔಟ್ ಆಗಿದ್ದರು. ನಂತರ ಬಂದ ಕೇದರ್ ಜಾಧವ್ ಅವರು ಕೂಡ 3 ರನ್ ಹೊಡೆದು ಔಟ್ ಆದರು.
Advertisement
Advertisement
ಈ ವಿಕೆಟ್ ನಂತರ ಐದನೇ ವಿಕೆಟ್ಗೆ ಹೊಂದಾದ ಜಡೇಜಾ ಮತ್ತು ಧೋನಿ ತಾಳ್ಮೆಯ ಆಟಕ್ಕೆ ಮುಂದಾದರು. ಐದನೇ ವಿಕೆಟ್ಗೆ ಈ ಜೋಡಿ 56 ಎಸೆತಗಳಲ್ಲಿ 71 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿತ್ತು. ಆದರೆ ಅರ್ಧ ಶತಕ ಸಿಡಿಸಿದ್ದ ಜಡೇಜಾ ಔಟ್ ಆದರು. ಆಗಲು ತಮ್ಮ ವಿಶ್ವಾಸವನ್ನು ಬಿಡದ ಧೋನಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ಸನಿಹಕೆ ತಂದರು. ಆದರೆ ಕೊನೆಯ ಓವರಿನಲ್ಲಿ 28 ರನ್ ಬೇಕಿದ್ದ ಕಾರಣ ಚೆನ್ನೈ 7 ರನ್ನಿಂದ ಸೋಲನ್ನು ಒಪ್ಪಿಕೊಂಡಿತು.
ಮೈದಾನದಲ್ಲೇ ಕುಸಿದ ಮಹಿ
ಎಂಎಸ್ ಧೋನಿ ಭಾರತ ಕ್ರಿಕೆಟ್ ತಂಡದಲ್ಲಿದ್ದ ಬಲಿಷ್ಠ ಆಟಗಾರ. ಜೊತೆಗೆ ಮೈದಾನದಲ್ಲಿ ಚಿರತೆಯ ವೇಗದಲ್ಲಿ ಓಡುತ್ತಿದ್ದ ಬ್ಯಾಟ್ಸ್ ಮ್ಯಾನ್, ಆದರೆ ಧೋನಿ ನಿನ್ನೆಯ ಪಂದ್ಯದಲ್ಲಿ ಎರಡು ರನ್ ಓಡಲು ಕಷ್ಟಪಟ್ಟರು. ರನ್ ಓಡಿ ಸುಸ್ತಾಗಿ ಮೈದಾನದಲ್ಲೇ ಕುಸಿದು ಕೂತ್ತಿದ್ದರು. ಇದನ್ನು ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಜೊತೆಗೆ ನಾವು ಗೆಲ್ಲುವ ಧೋನಿಯ ಅಭಿಮಾನಿಗಳಲ್ಲ. ಸೋತರು ನಾವು ಧೋನಿ ಅಭಿಮಾನಿಗಳೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಹಿ ಬೆಂಬಲಕ್ಕೆ ನಿಂತಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಂಡಿದೆ. ಈ ಮೂಲಕ ಕಳೆದ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಟ್ಯಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಯುವ ಆಟಗಾರರಾದ ಪ್ರಿಯಮ್ ಗಾರ್ಗ್ ಮತ್ತು ಅಭಿಷೇಕ್ ಶರ್ಮಾ ಅವರು ಅದ್ಭುತ ಆಟದಿಂದ 165 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ 7 ರನ್ ಅಂತರದಲ್ಲಿ ಸೋತು ಹೋಗಿದೆ.