– 11 ಜಿಲ್ಲೆಗಳಲ್ಲಿ ಕಫ್ರ್ಯೂ ಜಾರಿ
– ಚಿತ್ರಮಂದಿರಗಳಲ್ಲಿ ಶೆ.50ರಷ್ಟು ಭರ್ತಿ
ಚಂಡೀಗಢ: ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣದಿಂದಾಗಿ ಪಂಜಾಬ್ನಲ್ಲಿ ನೈಟ್ ಕಫ್ರ್ಯೂ ಹಾಗೂ 31ರವರೆಗೆ ಶಾಲಾ ಕಾಲೇಜನ್ನು ಮುಚ್ಚಲು ಆದೇಶಿಸಲಾಗಿದೆ.
Advertisement
ಕೊರೊನ ಸೋಂಕು ಹೆಚ್ಚು ಆಗಿರುವ ಹಿನ್ನಲೆಯಲ್ಲಿ 8 ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂವನ್ನು ವಿಧಿಸಲಾಗಿತ್ತು. ಇದೀಗ 11 ಜಿಲ್ಲೆಗಳಿಗೆ ಇದೆ ಆದೇಶವನ್ನು ಜಾರಿಗೊಳಿಸಲಾಗಿದೆ. ಸಭೆ, ಸಮಾರಂಭಗಳ ಮೇಲೆ ಸಂಪೂರ್ಣವಾದ ನಿಷೇಧವನ್ನು ವಿಧಿಸಲಾಗಿದೆ.
Advertisement
Advertisement
ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್ 31ರ ವರೆಗೆ ಮುಚ್ಚಬೇಕೆಂದು ಆದೇಶಿಸಲಾಗಿದೆ. ಮಾಲ್ಗಳಲ್ಲಿ 100 ಜನರಿಗೆ ಮಾತ್ರ ಅವಕಾಶವನ್ನು ಕೊಡಬೇಕು. ಚಿತ್ರಮಂದಿರಗಳಲ್ಲಿ ಶೆ.50ರಷ್ಟು ಮಾತ್ರ ಜನರನ್ನು ಸೇರಿಸಬೇಕು ಎಂದು ಆದೇಶಿಸಲಾಗಿದೆ.
Advertisement
ಪಂಜಾಬ್ನಲ್ಲಿ 24 ಗಂಟೆಗಳ ಅವಧಿಯಲ್ಲಿ 2,387 ಕೊರೊನಾ ಪ್ರಕರಣಗಳು ವರಧಿಯಾಗಿದೆ. ರಾಜ್ಯದಲ್ಲಿ 2.05 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 6,204 ಮಂದಿ ಮೃತಪಟ್ಟಿದ್ದಾರೆ.