ಚಂಡೀಗಡ: ಬಾಲಿವುಡ್ ನಟ ಸೋನು ಸೂದ್ ಅವರನ್ನು ಪಂಜಾಬ್ ರಾಜ್ಯದ ಐಕಾನ್ ಆಗಿ ಚುನಾವಣಾ ಆಯೋಗ ನೇಮಿಸಿದೆ.
Advertisement
ಜಗತ್ತಿನಾದ್ಯಂತ ಕೊರೊನಾ ಲಾಕ್ ಡೌನ್ ಇರುವ ಸಮಯದಲ್ಲಿ ಸೋನುಸೂದ್ ಮಾಡಿದ ಸಹಾಯವನ್ನು ಮನದಲ್ಲಿರಿಸಿಕೊಂಡಿದ್ದ ಪಂಜಾಬ್ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜ್, ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅದಕ್ಕೆ ಅನುಮೋದನೆ ನೀಡಿದೆ ಎಂದು ಟ್ವೀಟ್ ಮೂಲಕವಾಗಿ ತಿಳಿಸಿದ್ದಾರೆ.
Advertisement
ಪಂಜಾಬ್ನ ಮುಖ್ಯ ಚುನಾವಣಾ ಅಧಿಕಾರಿ ಈ ಬಗ್ಗೆ ಟ್ವಿಟ್ಟರ್ನಲ್ಲಿ ಘೋಷಣೆ ಮಡಿದ್ದಾರೆ. ಜನರ ರಿಯಲ್ ಹೀರೋ ಸೋನು ಸೂದ್ ಈಗ ಪಂಜಾಬ್ ರಾಜ್ಯದ ಐಕಾನ್ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನು ಓದಿ: ಪ್ರಕಟವಾಗಲಿದೆ ಸೋನುಸೂದ್ ಲಾಕ್ಡೌನ್ ಅನುಭವದ ಪುಸ್ತಕ
Advertisement
Advertisement
ಸೋನು ಸೂದ್ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಸಾರಿಗೆ ಸೌಲಭ್ಯಗಳನ್ನು ಏರ್ಪಡಿಸಿದ್ದರು. ಅವರ ಮಾನವೀಯ ಕಾರ್ಯಕ್ಕೆ ಸಮಾಜದ ಎಲ್ಲಾ ವರ್ಗದವರು ಮೆಚ್ಚುಗೆ ಸೂಚಿಸಿದ್ದರು. ನಟ ಸೋನು ಸೂದ್ ಅವರು ತಾವು ಮಾಡಿರುವ ಒಳ್ಳೆಯ ಕೆಲಸಗಳಿಂದ ಎಲ್ಲಾ ಲಾಕ್ ಡೌನ್ ಸಮಯದಲ್ಲಿ ಸುದ್ದಿಯಲ್ಲಿದ್ದರು. ಇದೀಗ ಈ ನಟ ಪಂಜಾಬ್ ರಾಜ್ಯದ ಐಕಾನ್ ಎಂದು ಭಾರತದ ಚುನಾವಣಾ ಆಯೋಗ ಎಂದು ಅಧಿಕೃತವಾಗಿ ತಿಳಿಸಿದೆ.
ਲੋਕਾਂ ਦਾ ਅਸਲ ਹੀਰੋ ਹੁਣ ਪੰਜਾਬ ਦਾ ਸਟੇਟ ਆਈਕਨ – ਸੋਨੂੰ ਸੂਦ @SonuSood (ਫ਼ਿਲਮ ਅਦਾਕਾਰ ਅਤੇ ਲੋਕ ਹਿਤੈਸ਼ੀ) #TheCEOPunjab #CEO #Punjab #Election #Voter #YouthVote #SVEEPPunjab #ECI #ELC #ElectoralLiteracy #YourVoteMatters #myvotematters #NoVoterToBeLeftBehind #SpecialSummaryRevision2021 pic.twitter.com/dH8VvDhYqh
— CEO Punjab (@TheCEOPunjab) November 16, 2020