ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಮಾಡಿದ ಚುನಾವಣೆ ಆಯೋಗ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್ ಅವರು ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿ ಅಂತ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೆ. ಆದರೆ ಚುನಾವಣಾ ಆಯೋಗ ಇದನ್ನು ಪರಿಗಣಿಸಲಿಲ್ಲ. ಕೋರ್ಟ್ಗೂ ಮನವಿ ಮಾಡಿದರೂ ಈ ಬಗ್ಗೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
Advertisement
Advertisement
ಕೋರ್ಟ್ ಗಳಲ್ಲಿ ಏನೇನ್ ಆಗುತ್ತಿದೆ ಎನ್ನುವ ಮಾಹಿತಿ ಇದೆ. ಪಂಚಾಯತಿ ಚುನಾವಣೆ ನಡೆಸಿದರೆ ಮನೆ ಮನೆಗೆ ವೈರಸ್ ಹರಡಿಸಿದಂತೆ ಆಗುತ್ತದೆ ಎಂದು ತಜ್ಞರು ಹೇಳಿದ್ದರು. ಹೀಗಾಗಿ ಚುನಾವಣೆ ನಡೆಸಬಾರದು ಎಂಬ ನಮ್ಮ ಸಲಹೆಯನ್ನು ಆಯೋಗ, ಕೋರ್ಟ್ ಪರಿಗಣಿಸಲಿಲ್ಲ. ಮಾರ್ಚ್ ವರೆಗೆ ಚುನಾವಣೆ ಮುಂದೂಡಬಹುದಿತ್ತು. ಆದರೆ ಈಗ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಈಗ ಅನಿವಾರ್ಯವಾಗಿ ಚುನಾವಣೆ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement