ಜಗೇಬ್: ಕ್ರೊಯೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ರಾಜಧಾನಿ ಜಗ್ರೇಬ್ ನಿಂದ 30 ಮೈಲಿ ದೂರದ ಬಾಲ್ಕನ್ನಲ್ಲಿ ಭೂಕಂಪನ ಸಂಭವಿಸಿದೆ. ನಿನ್ನೆ ಸಣ್ಣ ಪ್ರಮಾಣದಲ್ಲಿ ಸಂಭವಿಸಿರುವ ಭೂಕಂಪನ ಇಂದು ಮತ್ತೆ ಜೋರಾಗಿ ಅಬ್ಬರಿಸಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.4 ರಷ್ಟು ದಾಖಲಾಗಿದೆ. ಈ ಭೂಕಂಪದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
Advertisement
Advertisement
ಭೂಕಂಪದ ತೀವ್ರತೆಗೆ ಕಟ್ಟಡಗಳು ಧರೆಗುರುಳಿದ್ದು, ಹಲವರಿಗೆ ಗಾಯಗಳಾಗಿ ಮತ್ತು ಇನ್ನು ಹಲವು ಪ್ರಾಣ ಕಳೆದುಕೊಂಡಿದ್ದಾರೆ. ತುರ್ತು ನೆರವಿಗೆ ಮಿಲಿಟರಿ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಈ ಭೂಪಂಕಪದಲ್ಲಿ ಸಿಲುಕಿಕೊಂಡವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Advertisement
Advertisement
ಈ ಪ್ರದೇಶದದಲ್ಲಿರುವ ಪೆಟ್ರಿಂಜ ಮತ್ತು ಸಿನಾಕ್ ಪಟ್ಟಣಗಳ ಸಮೀಪ ಕಂಪನದ ಕೇಂದ್ರಬಿಂದು ದಾಖಲಾಗಿದೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.