ನವದೆಹಲಿ: ಹೊಸ ನಕ್ಷೆ ರಚಿಸಿ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದ ಚೀನಾ, ಇದೀಗ ಬಾಂಗ್ಲಾದೇಶವನ್ನೂ ದಾಳವನ್ನಾಗಿಸಿಕೊಳ್ಳಲು ಮುಂದಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಭಾರತದ ಮಿತೃತ್ವ ಹೊಂದಿರುವ ದೇಶಗಳನ್ನು ನಿಧನವಾಗಿ ತನ್ನತ್ತ ಸೆಳೆಯುವ ಯತ್ನ ಆರಂಭವಾಗಿದೆ.
ಭಾರತದಲ್ಲಿ ಚೀನಾ ವಿರುದ್ಧ ಆರ್ಥಿಕ ಸಮರದ ನಡೆಸುವ ಬಗ್ಗೆ ಚರ್ಚೆ ಆಗುತ್ತಿದ್ದರೆ ಬೀಜಿಂಗ್ ಢಾಕಾದತ್ತ ಕೈಚಾಚಿದೆ. ಅಭಿವೃದ್ಧಿಯಲ್ಲಿ ನಾವು ಹಿಂದುಳಿದಿರುವುದರಿಂದ ತನ್ನ ರಫ್ತಿನ ಮೇಲೆ ಸುಂಕ ಕಡಿಮೆ ಮಾಡಿ ಅಂತ ಬಾಂಗ್ಲಾದೇಶ ಕೇಳಿಕೊಂಡಿತ್ತು. ಬಾಂಗ್ಲಾ ದೇಶದ ಈ ಮನವಿಯನ್ನು ಚೀನಾ ಪುರಸ್ಕರಿಸಿದ್ದು, ಬಾಂಗ್ಲಾದೇಶದ 5,161 ವಸ್ತುಗಳ ಮೇಲಿನ ಶೇ.97ರಷ್ಟು ರಫ್ತು ಸುಂಕವನ್ನು ರದ್ದುಗೊಳಿಸಲು ಚೀನಾ ಮುಂದಾಗಿದೆ.
Advertisement
Advertisement
ಕೋವಿಡ್ 19 ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಫ್ತು ಸುಂಕವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು.
Advertisement
ಜೂನ್ 16 ರಂದು ಚೀನಾ ಬಾಂಗ್ಲಾದೇಶದ ಮನವಿಯನ್ನು ಪುರಸ್ಕರಿಸಿದೆ. ಲಡಾಖ್ ಗಲಾಟೆಯ ಮರುದಿನವೇ ಚೀನಾ ಬಾಂಗ್ಲಾ ಮನವಿಯನ್ನು ಒಪ್ಪಿಕೊಂಡಿರುವುದು ವಿಶೇಷ.
Advertisement
ಏಷ್ಯಾ-ಪೆಸಿಫಿಕ್ ವ್ಯಾಪಾರ ಒಪ್ಪಂದದಂತೆ ಈಗಾಗಲೇ ಚೀನಾ ಮತ್ತು ಬಾಂಗ್ಲಾದೇಶದ ನಡುವೆ 3,095 ಉತ್ಪನ್ನಗಳ ವ್ಯವಹಾರ ಸುಂಕ ರಹಿತವಾಗಿ ನಡೆಯುತ್ತಿದೆ. ಈಗ ಒಟ್ಟು 8,256 ಬಾಂಗ್ಲಾ ಉತ್ಪನ್ನಗಳು ಈ ಪಟ್ಟಿಗೆ ಸೇರ್ಪಡೆಯಾಗಿದ್ದು ಜುಲೈ 1 ರಿಂದ ಇದು ಜಾರಿಗೆ ಬರಲಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಏಷ್ಯಾ ಆಫ್ರಿಕಾ ರಾಷ್ಟ್ರಗಳ ಸಭೆಯಲ್ಲಿ ಚೀನಾ ಬಡ ರಾಷ್ಟ್ರಗಳಿಗೆ ಒಂದು ವರ್ಷ ಕಾಲ ರಫ್ತು ಸುಂಕವನ್ನು ರದ್ದು ಮಾಡಲಾಗುವುದು ಎಂದು ಹೇಳಿತ್ತು. ಕೋವಿಡ್ 19 ನಿಂದ ಆರ್ಥಿಕತೆ ಕುಸಿತಗೊಂಡ ರಾಷ್ಟ್ರಗಳಿಗೆ ತನ್ನ ನಿರ್ಧಾರದಿಂದ ನೆರವಾಗಲಿದೆ ಎಂದು ಚೀನಾ ಹೇಳಿತ್ತು.