ವಿಜಯಪುರ: ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
35 ವರ್ಷದ ಶರಣಮ್ಮ ವೀರೇಶ್ ಪಾಟೀಲ್ ಮೃತ ಮಹಿಳೆ. ಮಹಿಳೆಯ ಪತಿ ಮತ್ತು ಕುಟುಂಬಸ್ಥರು ವಿಜಯಪುರಲ್ಲಿ ವಾಸವಾಗಿದ್ರೆ, ಶರಣಮ್ಮ ಮಾತ್ರ ಒಂಟಿಯಾಗಿ ಗ್ರಾಮದಲ್ಲಿದ್ದರು. ಕುಟುಂಬಸ್ಥರೇ ಶರಣಮ್ಮರನ್ನ ಒಂಟಿಯಾಗಿ ಗ್ರಾಮದಲ್ಲಿರಿಸಿದ್ದರು ಎನ್ನಲಾಗಿದೆ.
Advertisement
Advertisement
ಶರಣಮ್ಮ ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೊಂಚಿ ಗ್ರಾಮದವರು. ನಾಲ್ಕು ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ವೀರೇಶ್ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಹಾಗೂ ಕುಟುಂಬಸ್ಥರು ಕೊಲೆ ಮಾಡಿದ್ದಾರೆಂದು ಶರಣಮ್ಮ ಪೋಷಕರ ಆರೋಪಿಸುತ್ತಿದ್ದಾರೆ.
Advertisement
Advertisement
ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಶರಣಮ್ಮ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.