ಗದಗ: ನೆಟ್ವರ್ಕ್ ಸಮಸ್ಯೆಯಿಂದ ಗದಗ ಜಿಲ್ಲೆಯ ಕಬಲಾಯತಕಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಪಡೆಯಲು ಪರದಾಡುತ್ತಿದ್ದಾರೆ.
ಕೊರೊನಾ ಮಹಾಮಾರಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಕೊರೊನಾ ಭಿತಿಯಿಂದ ಶಾಲಾ-ಕಾಲೇಜುಗಳನ್ನು ಕೂಡ ಬಂದ್ ಮಾಡಿ ಆನ್ಲೈನ್ ಶಿಕ್ಷಣ ನೀಡಲಾಗುತ್ತಿದೆ. ಆದರೆ ಕಬಲಾಯತಕಟ್ಟಿ ಗ್ರಾಮದಲ್ಲಿ ನೆಟ್ವರ್ಕ್ ಸಿಗದೇ ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೇ ಮಕ್ಕಳು ಕಷ್ಟಪಡುತ್ತಿದ್ದಾರೆ.
Advertisement
Advertisement
ಓಗಾಗಲೆ ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಮರಿಚಿಕೆಯಾಗಿದೆ. ಈ ಗ್ರಾಮದಲ್ಲಿ ಸುಮಾರು 1,500 ಜನ ಸಂಖ್ಯೆ ಇದೆ. ಅದರಲ್ಲಿ 15 ಎಸ್.ಎಸ್.ಎಲ್.ಸಿ, 17 ಜನ ಪಿಯು, ಐಟಿಐ, ಡಿಪ್ಲೊಮಾ, 30 ಡಿಗ್ರಿ, 11 ಜನ ಸ್ನಾತಕೋತ್ತರ ವಿದ್ಯಾರ್ಥಿಗಳು, 30ಕ್ಕೂ ಅಧಿಕ ನೌಕರರಿದ್ದಾರೆ.
Advertisement
Advertisement
ಇವರಿಗೆಲ್ಲಾ ನೆಟ್ವರ್ಕ್ ಅವಶ್ಯಕತೆ ಇದೆ. ಆದರೆ ಮೊದಲಿನಿಂದಲೂ ಇಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಆನ್ಲೈನ್ ಶಿಕ್ಷಣ ಪಡೆಯಲಾಗುತ್ತಿಲ್ಲ. ಮೊಬೈಲ್ ನೆಟ್ವರ್ಕ್ಗಾಗಿ ಮನೆಯ ಮೇಲೆ ಏರಬೇಕು, ಇಲ್ಲವೇ ದೂರದ ಜಮೀನಿಗೆ ಹೋಗಬೇಕು. ಅಲ್ಲದೇ ಪಟ್ಟಣದ ಹತ್ತಿರ ಬರಬೇಕು. ನೆಟ್ವರ್ಕ್ ಹೋಗಿ ಬಂದು ಮಾಡುವುದರಿಂದ ಆನ್ನೈನ್ ಕ್ಲಾಸ್ನಲ್ಲಿ ಶಿಕ್ಷಕರು ಹೇಳಿಕೊಡುವ ಪಾಠ ಅರ್ಥ ಆಗುತ್ತಿಲ್ಲ. ಪದೇ ಪದೇ ಡಿಸ್ ಕನೆಕ್ಟ್ ಆದರೆ ಮತ್ತೆ ಸೇರಿಸಿಕೊಳ್ಳಲ್ಲ. ಪ್ರಶ್ನೆ ಪತ್ರಿಕೆಯಾಗಲಿ, ಪಿಡಿಎಫ್ ಫೈಲ್ ಆಗಲಿ, ಸಿಲೆಬಸ್ ಆಗ್ಲಿ ಡೌನ್ಲೋಡ್ ಆಗುವುದಿಲ್ಲ ಎಂದು ವಿದ್ಯರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ನೆಟ್ವರ್ಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಜಿಲ್ಲಾ ಪಂಚಾಯತ್, ಶಾಸಕರು, ಪ್ರಧಾನ ಮಂತ್ರಿವರೆಗೆ ಪತ್ರ ಬರೆದ್ದಿದ್ದಾರೆ. ಕೆಲವು ಕಂಪನಿಗಳು ನಿಮ್ಮ ಊರು ತುಂಬಾನೆ ತಗ್ಗು ಪ್ರದೇಶದಲ್ಲಿದೆ ಇಲ್ಲಿ ಆಗುವುದಿಲ್ಲ ಎಂದರೆ, ಇನ್ನು ಕೆಲವರು ಕೇವಲ 1,500 ಜನರು ಇರುವ ಕಾರಣ ಟವರ್ ಹಾಕುವುದಕ್ಕೆ ಆಗುವುದಿಲ್ಲ ಎಂದು ಹೇಳಿ ಹೋಗಿದ್ದಾರೆ.
ಈ ಸಮಸ್ಯೆ ಬಗೆ ಹರಿಯದ ಕಾರಣ ಆನ್ಲೈನ್ ಕ್ಲಾಸ್ಗೋಸ್ಕರ ಅನೇಕ ವಿದ್ಯಾರ್ಥಿಗಳು ಊರು ತೊರೆದು ಸಂಬಂಧಿಕರ ಮನೆಗಳಲ್ಲಿ ಇರುವಂತಾಗಿದೆ. ಅಲ್ಲದೇ ವರ್ಕ್ ಫ್ರಮ್ ಹೋಂ ಇದ್ದವರ ಪರಿಸ್ಥಿತಿ ಹೇಳತೀರದು. ಈಗಾಗಲೇ ಈ ಸಮಸ್ಯೆ ಕುರಿತು ಶಾಸಕರಿಗೆ ಹಾಗೂ ಸಂಬಂಧಪಟ್ಟವರಿಗೂ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಈವರೆಗೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾರಿಗಾದರೂ ಫೋನ್ ಮಾಡಬೇಕು ಅಂದರೆ ಹರಸಾಹಸ ಪಡಬೇಕು. ಗ್ರಾಮದಲ್ಲಿ ಅಂಬುಲೆನ್ಸ್, ತುರ್ತು ಸೇವೆಗೆ ಫೋನ್ ಮಾಡಬೇಕಾದರೂ ತುಂಬಾನೇ ಕಷ್ಟ. ಗದಗ ಜಿಲ್ಲಾ ಕೇಂದ್ರದಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿದ್ದರೂ ಕಬಲಾಯತಕಟ್ಟಿ ಗ್ರಾಮ ಡಿಜಿಟಲ್ ಜಗತ್ತಿನಿಂದ ದೂರವಿದೆ. ಇದನ್ನೂ ಓದಿ: ಇಂದು ಡೆಲ್ಟಾ ಪ್ಲಸ್ ಶಂಕಿತ ಸೋಂಕಿತರ ವರದಿ ಪ್ರಕಟ