ಮಾಲೀಕ ಹೇಳಿದ ಕೆಲಸವನ್ನು ಸಾಮಾನ್ಯವಾಗಿ ಗಿಳಿಗಳು ಮಾಡುತ್ತವೆ. ಆದರೆ ಗಿಳಿಯೊಂದು ತನ್ನ ಮಾಲೀಕ ನುಡಿಸುತ್ತಿದ್ದ ಗಿಟಾರ್ ವಾದ್ಯಕ್ಕೆ ಹಾಡನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಈ ವೀಡಿಯೋವನ್ನು ‘ಫ್ಲಾಪ್ ಇರಾ ಆರೆಂಜ್ ಕೋಟ್ ಗಾಯ್’ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮಾಲೀಕ ಫ್ರಾಂಕ್ ಗಿಟಾರ್ ನುಡಿಸುವ ಅಭ್ಯಾಸ ಹೊಂದಿದ್ದು, ಅವರು ಗಿಟಾರ್ ನುಡಿಸುವಾಗಲೆಲ್ಲ ಗಿಳಿ ಮೆಲೋಡಿಯಾಗಿ ಹಾಡು ಹೇಳುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್ಗೆ ಮಾಡಿದ್ದೇನು ಗೊತ್ತಾ?
Advertisement
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 35 ಲಕ್ಷ ವೀವ್ಸ್ ಆಗಿದ್ದು, 70 ಸಾವಿರ ರೀ ಟ್ವೀಟ್ ಮತ್ತು 262 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಈ ವೀಡಿಯೋ ನೋಡಿ ಅನೇಕ ಮಂದಿ ಇದು ಅದ್ಭುತ ಗಿಳಿ ಇಲ್ಲಿಯವರೆಗೂ ಇಂತಹ ಗಿಳಿಯನ್ನು ನಾನು ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
Advertisement
obsessed with this guy who just uploads videos of him playing classic rock riffs while his birb freestyles vocals pic.twitter.com/PRad1TY33D
— flop era orange coat guy (@rtnordy) May 26, 2021