ಮಂಡ್ಯ: ಕಳೆದ ಕೆಆರ್ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಶಾಸಕ ನಾರಾಯಣಗೌಡ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟ ಸೇರಲು ಒಂದು ವಾರದಿಂದ ಸರ್ಕಸ್ ಮಾಡುತ್ತಿದ್ದಾರೆ.
Advertisement
ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಾರಾಯಣಗೌಡ ಅವರು ಇದೀಗ ನೂತನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಒಂದು ವಾರದಿಂದ ಕ್ಷೇತ್ರದ ಕಡೆ ಬಾರದೆ ಬೆಂಗಳೂರಿನಲ್ಲೇ ಉಳಿದುಕೊಂಡು ತೆರೆಮರೆಯ ಕಸರತ್ತು ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡು ಕೆಆರ್ಪೇಟೆ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಮಲವನ್ನು ನಾರಾಯಣಗೌಡ ಅರಳಿಸಿದ್ದರು. ಈ ಮೂಲಕ ಯಡಿಯೂರಪ್ಪ ಅವರ ಸರ್ಕಾರ ರಾಜ್ಯದಲ್ಲಿ ಬರುವ ನಿಟ್ಟಿನಲ್ಲಿ ನಾರಾಯಣಗೌಡ ಅವರು ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಯಡಿಯೂರಪ್ಪ ಅವರು ನಾರಾಯಣಗೌಡ ಅವರ ಮೇಲಿನ ಪ್ರೀತಿ ಹಾಗೂ ಹುಟ್ಟುರಿನ ಒಲವಿಗಾಗಿ ಸಚಿವ ಸ್ಥಾನ ನೀಡಿ ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದ್ದರು. ಇದನ್ನೂ ಓದಿ: 2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್
Advertisement
Advertisement
ಇದೀಗ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ದಿನದಿಂದಲೂ ಸಹ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ನಾರಾಯಣಗೌಡ, ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ನಾರಾಯಣಗೌಡರಿಗೆ ಇದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲೂ ಬಿಜೆಪಿ ಬಾವುಟ ಹಾರಿಸಬೇಕು ಎಂದರೆ ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಹೀಗಾಗಿ ಹೈಕಮಾಂಡ್ ನಾರಾಯಣಗೌಡ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎಂದು ನಾರಾಯಣಗೌಡ ಅವರ ಆಪ್ತರು ಹೇಳುತ್ತಿದ್ದಾರೆ.