ಉತ್ತರ ಕಾರ್ನಟಕದ ಅಡುಗೆ ಕೊಂಚ ಖಾರ ಜಾಸ್ತಿಯಾದರೂ ರುಚಿ ಹೆಚ್ಚು ಎನ್ನುವುದು ತಿಳಿದಿದೆ. ಉತ್ತರ ಕರ್ನಾಟಕದ ಖಾದ್ಯಗಳು ಸವಿಯಲು ಬಲುರುಚಿಯಾಗಿರುತ್ತದೆ. ಹಾಗೆಯೇ ಬಾಯಲ್ಲಿ ನೀರೂರಿಸುವ ಉತ್ತರಕರ್ನಾಟಕದ ಪ್ರಸಿದ್ಧ ಬದನೇಕಾಯಿ ಎಣ್ಣೆಗಾಯಿಪಲ್ಯ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
* ಬಿಳಿ ಎಳ್ಳು- 2 ಟೇಬಲ್ ಸ್ಪೂನ್
* ಶೇಂಗಾ- 2 ಟೇಬಲ್ ಸ್ಪೂನ್
* ಒಣಕೊಬ್ಬರಿ- ಅರ್ಧ ಕಪ್
* ಇರುಳ್ಳಿ -2 ದೊಡ್ಡ ಗಾತ್ರದ್ದು
* ಶುಂಠಿ- ಒಂದು ಇಂಚಿನಷ್ಟು
* ಬೆಳ್ಳುಳ್ಳಿ- 4 ರಿಂದ 5
* ಲವಂಗ- ನಾಲ್ಕು
* ಕರಿಬೇವು
* ಚೆಕ್ಕೆ- 3 ರಿಂದ 4
* ಅರಿಶಿಣಪುಡಿ- 1 ಟೀ ಸ್ಪೂನ್
* ಬೆಲ್ಲ- ಒಂದು ಇಂಚು
* ಖಾರದಪುಡಿ- 3 ಟೀ ಸ್ಪೂನ್
* ದನಿಯಾಪುಡಿ – 1 ಟೀ ಸ್ಪೂನ್
* ಹುಣಸೆಹಣ್ಣು ಸ್ವಲ್ಪ
* ಸಾಸಿವೆ- ಒಂದು ಟೀ ಸ್ಪೂನ್
* ಎಣ್ಣೆ ಒಂದು ಕಪ್
* ಒಣಮೆಣಸು- 3 ರಿಂದ 4
Advertisement
Advertisement
Advertisement
ಮಾಡುವ ವಿಧಾನ:
* ಮೊದಲು ಒಂದು ತವಾಗೆ ಶೇಂಗಾವನ್ನು ಹಾಕಿ ಸಿಪ್ಪೆ ಬಿಡುವವರೆಗೆ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.
* ಹಾಗೇ ಸಣ್ಣ ಉರಿ ಬೆಂಕಿಯಲ್ಲಿ ಬಿಳಿ ಎಳ್ಳನ್ನು ತವಾಗೆ ಹಾಕಿ ಬಿಳಿ ಎಳ್ಳಿನ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ಹೀಗೆಯೆ ಕೊಬ್ಬರಿಯನ್ನು ಹಸಿ ಅಂಶ ಹೋಗುವವರೆಗೂ ಹುರಿದು ತೆಗೆದಿಟ್ಟುಕೊಳ್ಳಬೇಕು.
*ನಂತರ ಒಂದು ಪಾತ್ರೆಗೆ ಒಂದು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿಯಾದ ಮೇಲೆ ಈರುಳ್ಳಿ ಹಾಕಬೇಕು. ಈರುಳ್ಳಿ ಕೆಂಪು ಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಬೇಕು.
* ನಂತರ ಇದೇ ಪಾತ್ರೆಗೆ ಒಂದು ಇಂಚಿನಷ್ಟು ಶುಂಠಿ, 4 ರಿಂದ 5 ಬೆಳ್ಳುಳ್ಳಿ, ನಾಲ್ಕು ಲವಂಗ ಹಾಗೂ ಕರಿಬೇವು, ಚೆಕ್ಕೆಯನ್ನು ಮೂರರಿಂದ ನಾಲ್ಕು ಹಾಕಿ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.
* ನಂತರ ಮಿಕ್ಸಿಜಾರಿಗೆ ಹುರಿದು ತೆಗೆದಿಟ್ಟ ಎಳ್ಳು, ಕೊಬ್ಬರಿ ತುರಿ, ಶೇಂಗಾವನ್ನು ಹಾಕಿ ರುಬ್ಬಿಕೊಳ್ಳಬೇಕು.
* ಈಗ ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು
* ನಂತರ ಈ ಮೊದಲೇ ಹುರಿದು ತೆಗೆದಿಟ್ಟಿರುವ ಈರುಳ್ಳಿ ಮಸಾಲೆಯನ್ನು ಮಿಕ್ಸಿಜಾರಿಗೆ ಹಾಕಿ ನಂತರ ಇದರ ಜೊತೆಯಲ್ಲಿ ಅರಿಶಿಣಪುಡಿ ಒಂದು ಇಂಚು ಬೆಲ್ಲ, 3 ಟೀ ಸ್ಪೂನ್ ಖಾರದಪುಡಿ ಹಾಗೂ 1 ಟೀ ಸ್ಪೂನ್ ದನಿಯಾಪುಡಿ ಹಾಗೂ ಸ್ವಲ್ಪ ಗರಂ ಮಸಾಲೆಯನ್ನು ಹಾಕಿ ರುಬ್ಬಿಕೊಳ್ಳ ಬೇಕು. ಆದರೆ ರುಬ್ಬಿಕೊಳ್ಳಲು ನೀರನ್ನು ಬಳಸ ಬಾರದು ಹುಣಸೆಹಣ್ಣಿನ ರಸದಲ್ಲಿಯೇ ಮಸಸಾಲೆಯನ್ನು ರುಬ್ಬಿಕೊಳ್ಳಬೇಕು.
* ಈಗಾಗಲೇ ರುಬ್ಬಿ ತೆಗೆದಿರುವ ಎರಡು ಮಸಾಲೆಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಉಪ್ಪು ನೀರಿನಲ್ಲಿ ಅದ್ದಿಟ್ಟಿರುವ ಬದನೆಕಾಯಿಗೆ ಈ ಮಸಾಲೆಯನ್ನು ತುಂಬ ಬೇಕು.
* ನಂತರ ಒಂದು ಸ್ಟವ್ ಮೇಲೆ ಪಾತ್ರೆ ಇಟ್ಟು 4 ರಿಂದ 5 ಸ್ಪೂನ್ ಎಣ್ಣೆಹಾಕಿ ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಮತ್ತು ಒಣಮೆಣಸು ಹಾಕಿ ಫ್ರೈ ಮಾಡಿ ಮಸಾಲೆ ತುಂಬಿದ ಬದನೆಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಒಂದು ಕಪ್ನಷ್ಟು ನೀರನ್ನು ಹಾಕಿ ಸಣ್ಣ ಉರಿ ಬೆಂಕಿಯಲ್ಲಯೇ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಎಣ್ಣೆಗಾಯಿಪಲ್ಯ ಸವಿಯಲು ಸಿದ್ಧವಾಗುತ್ತದೆ.