ಬಳ್ಳಾರಿ: ವೃತ್ತಿ ಬದುಕಿಗೆ ನಿವೃತ್ತಿ ಸಿಗುವ ದಿನವೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಎಸ್ಐ ಬದುಕಿಗೆ ನಿವೃತ್ತಿ ಪಡೆದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯ ಎಎಸ್ಐ ಯಲ್ಲಪ್ಪ ಕದ್ರಳಿ (60) ಕೊರೊನಾ ಸೋಂಕಿಗೆ ಇಂದು ಬಲಿಯಾಗಿದ್ದಾರೆ. ಕಳೆದ 34 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಯಲಪ್ಪ ಕದ್ರಳಿ ಅವರು ಇಂದು ವೃತ್ತಿ ಬದುಕಿಗೆ ನಿವೃತ್ತಿ ಪಡೆಯಬೇಕಿತ್ತು. ನಿವೃತ್ತಿ ಪಡೆಯುವ ದಿನವೇ ತಮ್ಮ ಬದುಕಿಗೆ ವಿದಾಯ ಹೇಳಿದ್ದಾರೆ.
Advertisement
ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ತೀವ್ರವಾಗಿ ಉಲ್ಬಣವಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.