-ನಿರಾಶ್ರಿತ ಕೇಂದ್ರ ಸೀಲ್ಡೌನ್
ಲಕ್ನೋ/ಕಾನ್ಪುರ: ಸರ್ಕಾರದ ನಿರಾಶ್ರಿತರ ಕೇಂದ್ರ (ಬಾಲ ಗೃಹ)ದಲ್ಲಿದ್ದ 57 ಯುವತಿಯರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇಷ್ಟು ಮಾತ್ರವಲ್ಲದೇ ಓರ್ವ ಯುವತಿ ಹೆಚ್ಐವಿ ಪಾಸಿಟಿವ್ ನಿಂದ ಬಳಲುತ್ತಿದ್ದಾಳೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ತನಿಖೆಗೆ ಅದೇಶಿಸಬೇಕೆಂದು ಆಗ್ರಹಿಸಿದ್ದಾರೆ.
Advertisement
ನಿರಾಶ್ರಿತ ಕೇಂದ್ರದಲ್ಲಿ 57 ಬಾಲಕಿಯರಿಗೆ ಸೋಂಕು ತಗುಲಿರೋದು ದೃಢ ಪಡುತ್ತಿದ್ದಂತೆ ಎಲ್ಲರನ್ನು ಕೋವಿಡ್-19 ಚಿಕಿತ್ಸೆಗಾಗಿ ರಾಮಾ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ 17 ವರ್ಷದ ಇಬ್ಬರು ಅಪ್ರಾಪ್ತೆಯರು ಗರ್ಭಿಣಿ ಆಗಿರೋದು ವಿಚಾರ ತಿಳಿದಿದ್ದು, ಜೊತೆಗೆ ಒಬ್ಬಳಿಗೆ ಹೆಚ್ಐವಿ ಪಾಸಿಟಿವ್ ಎಂಬ ವಿಷಯ ಬಯಲಾಗಿದೆ. ಗರ್ಭಿಣಿಯಾಗಿರುವ ಅಪ್ರಾಪ್ತೆಯರನ್ನು ಹೆರಿಗೆ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
Advertisement
ನಿರಾಶ್ರಿತರ ಕೇಂದ್ರ ಸೀಲ್ಡೌನ್: ಕಾನ್ಪುರ ಸ್ವರೂಪ ನಗರದಲ್ಲಿರುವ ಬಾಲಕಿಯರ ನಿರಾಶ್ರಿತರ ಕೇಂದ್ರವನ್ನು ಆರೋಗ್ಯಾಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ನಿರಾಶ್ರಿತ ಕೇಂದ್ರದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಬಾಲಕಿಯರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಇಬ್ಬರು ಅಪ್ರಾಪ್ತೆಯರು ನಿರಾಶ್ರಿತ ಕೇಂದ್ರ ಬಂದಿದ್ದು ಯಾಗಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Advertisement
ಬಾಲಕಿಯರು ವಾಸವಾಗಿದ್ದ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ. ಬಾಲಕಿಯರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಅದೇ ಕಟ್ಟಡದಲ್ಲಿವೆ. ಇಬ್ಬರು ಬಾಲಕಿಯರ ಹಿನ್ನೆಲೆ ಮತ್ತು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪ್ರೊಬೆಷನ್ ಆಫಿಸರ್ ಅಜಿತ್ ಕುಮಾರ್ ಹೇಳಿದ್ದಾರೆ.